ಭಾನುವಾರ, ಏಪ್ರಿಲ್ 11, 2021
27 °C

ವೃತ್ತಗಳ ಅಭಿವೃದ್ಧಿ: ವಾಸ್ತುಶಿಲ್ಪಿಗಳ ಜೊತೆ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ನಗರದ ಪ್ರಮುಖ 12 ವೃತ್ತಗಳನ್ನು ಆಕರ್ಷಣೀಯಗೊಳಿಸಲು ಮುಂದಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ
ಹಾಗೂ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ಈ ಸಂಬಂಧ ವಾಸ್ತುಶಿಲ್ಪಿಗಳ ಜೊತೆ ಸೋಮವಾರ ಸಭೆ ನಡೆಸಿದರು. 

ಸಭೆಯ ಬಳಿಕ ಮಾತನಾಡಿದ ಗುಪ್ತ, ‘ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಹಾಗೂ ವೃತ್ತಗಳನ್ನು ಆಕರ್ಷಣೀಯಗೊಳಿಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ವಾಸ್ತುಶಿಲ್ಪಿಗಳು ವಿವಿಧ ಪರಿಕಲ್ಪನೆಗಳನ್ನಿಟ್ಟುಕೊಂಡು ವೃತ್ತಗಳ ವಿನ್ಯಾಸ ಸಿದ್ಧಪಡಿಸಿದ್ದಾರೆ. ಅವುಗಳನ್ನು ಕಾರ್ಯಗತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.   

‘ಚಾಲುಕ್ಯ ವೃತ್ತದಲ್ಲಿ ಚಾಲುಕ್ಯರ ಕಾಲದ ಗತವೈಭವ ಬಿಂಬಿಸುವುದು, ಅನಿಲ್ ಕುಂಬ್ಳೆ ವೃತ್ತವನ್ನು ಕ್ರೀಡಾ ಆಸಕ್ತಿಯ ಪರಿಕಲ್ಪನೆಯಡಿ ವಿನ್ಯಾಸಗೊಳಿಸುವುದು, ಮೈಸೂರು ಬ್ಯಾಂಕ್ ವೃತ್ತವನ್ನು ಪ್ರಸಿದ್ಧ ಕರಗ ಮಹೋತ್ಸವದ ವೈಭವದ ಮಾದರಿಯಲ್ಲಿ ರೂಪಿಸುವ ಉದ್ದೇಶವಿದೆ. ಪಾದಚಾರಿ ಮಾರ್ಗಗಳ ಸೌಂದರ್ಯೀಕರಣಕ್ಕೂ ಹೆಚ್ಚು ಒತ್ತು ನೀಡಲಾಗಿದೆ’ ಎಂದರು.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು