ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೋರಿಚ್‌ ಎಸ್ಟೇಟ್‌ ಪಾರಂಪರಿಕ ಜೈವಿಕ ತಾಣವಾಗಲಿ’

ಸರ್ಕಾರಕ್ಕೆ ವರದಿ ಸಲ್ಲಿಸಿದ ಕರ್ನಾಟಕ ಜೀವವೈವಿಧ್ಯ ಮಂಡಳಿ
Last Updated 30 ಡಿಸೆಂಬರ್ 2020, 21:32 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕನಕಪುರ ರಸ್ತೆಯಲ್ಲಿರುವ ದೇವಿಕಾರಾಣಿ–ರೋರಿಚ್‌ ಎಸ್ಟೇಟ್‌ ಅನ್ನು ‘ಪಾರಂಪರಿಕ ಜೈವಿಕ ತಾಣ’ ಎಂದು ಘೋಷಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಶಿಫಾರಸು ಮಾಡಿದೆ.

ಈ ಕುರಿತು ತಜ್ಞರ ತಂಡ ಸಿದ್ಧಪಡಿಸಿದ ವರದಿಯನ್ನು ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅವರಿಗೆ ಬುಧವಾರ ಸಲ್ಲಿಸಿದರು. ಮುಖ್ಯ ಕಾರ್ಯದರ್ಶಿಯವರು ಈ ಎಸ್ಟೇಟ್‌ ಬೋರ್ಡ್‌ನ ಅಧ್ಯಕ್ಷರೂ ಆಗಿದ್ದಾರೆ.

ಮಂಡಳಿಯ ಅಧ್ಯಕ್ಷರು, ತಜ್ಞರು ಹಾಗೂ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡ ಡಿ.24ರಂದು ಎಸ್ಟೇಟ್‌ಗೆ ಭೇಟಿ ನೀಡಿ, ಅಲ್ಲಿನ ಪರಿಸರ, ಜೀವವೈವಿಧ್ಯದ ಪರಿಸ್ಥಿತಿಯ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಿದೆ.

ಸಮಿತಿಯ ಶಿಫಾರಸುಗಳು

* ಈ ಎಸ್ಟೇಟ್‌ ಬೆಂಗಳೂರಿನ ಅದ್ಭುತ ಜೈವಿಕ ಭಂಡಾರ. ಪಾರಂಪರಿಕ ಸಸ್ಯಲೋಕವನ್ನು ಇದು ಹೊಂದಿದೆ.

* 2002ರ ಜೀವವೈವಿಧ್ಯ ಕಾಯ್ದೆ ಅಡಿಯಲ್ಲಿ ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಿಸಬೇಕು

* ಎಸ್ಟೇಟ್‌ಗೆ ನಿಯಂತ್ರಿತ ಪ್ರವೇಶಕ್ಕೆ ಅವಕಾಶ ನೀಡಬೇಕು

* ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಬೇಕು

* ಎಸ್ಟೇಟ್‌ ಸುತ್ತ ಗೋಡೆ ನಿರ್ಮಾಣವಾಗಬೇಕು

* ಎಸ್ಟೇಟ್‌ನ ಅರಣ್ಯ ಸಂಪತ್ತಿನ ರಕ್ಷಣೆ ಹೊಣೆ ಅರಣ್ಯ ಇಲಾಖೆಗೆ ನೀಡಬೇಕು

* ಎಸ್ಟೇಟ್‌ನಲ್ಲಿನ ಕೆರೆಯ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು

* ತಾತಗುಣಿ ಎಸ್ಟೇಟ್‌ ಮಾಲಿನ್ಯ ತಡೆಯಬೇಕು

*ಎಸ್ಟೇಟ್‌ನ ಟ್ರಸ್ಟ್‌ನಲ್ಲಿ ಪರಿಸರ ತಜ್ಞ ಹಾಗೂ ಜೀವವೈವಿಧ್ಯ ಮಂಡಳಿಯ ಪ್ರತಿನಿಧಿ ಆಹ್ವಾನಿತ ಸದಸ್ಯರಾಗಿ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT