ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ನಿಂದ 300ನೇ ‘ಧ್ರುವ್’ ಹೆಲಿಕಾಪ್ಟರ್‌

Last Updated 29 ಸೆಪ್ಟೆಂಬರ್ 2020, 20:19 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಎಲ್‌ 300ನೇ ‘ಸುಧಾರಿತ ಲಘು ಹೆಲಿಕಾಪ್ಟರ್’‌ (ಎಎಲ್‌ಎಚ್‌) ಧ್ರುವ್ ತಯಾರಿಸಿದ್ದು, ಅದನ್ನು ಮಂಗಳವಾರ ಗಣ್ಯರ ಮುಂದೆ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್, 1992ರ ಆ.30ರಂದು ಎಎಲ್‌ಎಚ್‌ನ ಮೂಲ ಮಾದರಿಯ (ಪ್ರೊಟೊಟೈಪ್‌) ಹಾರಾಟ ನಡೆದಿತ್ತು. ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಈಗ‌ ವಿಶ್ವದರ್ಜೆಯ, ಸರಿಸಾಟಿ ಇಲ್ಲದ ಹೆಲಿಕಾಪ್ಟರ್‌ ಎಂದು ಮನ್ನಣೆ ಪಡೆದಿದೆ ಎಂದರು.

ಎಎಲ್‌ಎಚ್‌ ಮಾರ್ಕ್‌–1 ರಿಂದ ಮಾರ್ಕ್–‌ 4 ರವರೆಗೆ ಸಾಗಿ ಬಂದ ವಿಕಾಸದ ಹಾದಿ ಅಸಾಧಾರಣ. ಇದರಿಂದ ದೇಶಿ ನಿರ್ಮಿತ ಹೆಲಿಕಾಪ್ಟರ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಕ್ಕಿತು ಎಂದು ಅವರು ನೆನಪಿಸಿಕೊಂಡರು.

300 ನೇ ಹೆಲಿಕಾಪ್ಟರ್‌ನ ರೋಲ್‌ ಔಟ್‌ ಪ್ರಮಾಣಪತ್ರವನ್ನು ಏರೋನಾಟಿಕಲ್‌ ಗುಣಮಟ್ಟ ಖಾತರಿ ಮಹಾ ನಿರ್ದೇಶನಾಲಯದ ಹೆಚ್ಚುವರಿ ಮಹಾ ನಿರ್ದೇಶಕ ವೈ.ಕೆ.ಶರ್ಮಾ ಅವರು ಹೆಲಿಕಾಪ್ಟರ್‌ ಕಾಂಪ್ಲೆಕ್ಸ್‌ನ ಸಿಇಒ ಜಿ.ವಿ.ಎಸ್‌ ಭಾಸ್ಕರ್‌ ಅವರಿಗೆ ಹಸ್ತಾಂತರಿಸಿದರು.

ಪ್ರಸ್ತುತ ಎಚ್‌ಎಎಲ್‌ 73 ಎಎಲ್‌ಎಚ್‌ಗಳನ್ನು‌ ತಯಾರಿಸುತ್ತಿದ್ದು, ಇದರಲ್ಲಿ ಭೂಸೇನೆಗೆ 41, ನೌಕಾಪಡೆಗೆ 16 ಮತ್ತು ಭಾರತೀಯ ಕೋಸ್ಟ್‌ ಗಾರ್ಡ್‌ಗೆ 16 ಹೆಲಿಕಾಪ್ಟರ್‌ಗಳ ತಯಾರಿಕೆ ಗುತ್ತಿಗೆ ಪಡೆದಿದೆ. ಈಗಾಗಲೇ 38 ತಯಾರಿಸಿದ್ದು, ಉಳಿದ ಹೆಲಿಕಾಪ್ಟರ್‌ಗಳನ್ನು 2022 ರಲ್ಲಿ ಪೂರ್ಣಗೊಳಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT