ಬೆಂಗಳೂರು: ವೈಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ವಿನೋದ್‌ಕುಮಾರ್ (31) ಎಂಬುವರು ಪಿನಾಯಿಲ್ ಕುಡಿದು ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
‘ಕೆ.ಆರ್. ಪುರ ನಿವಾಸಿ ವಿನೋದ್ ಕುಮಾರ್, ವೈಯಾಲಿಕಾವಲ್ ನಲ್ಲಿರುವ ಪತ್ನಿ ನಿರ್ಮಲಾ ಅವರ ಮನೆಯಲ್ಲಿ ಸೋಮವಾರ ಫಿನಾಯಿಲ್ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆಗೆಂದು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಅಸುನೀಗಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ವಿನೋದ್ ಹಾಗೂ ನಿರ್ಮಲಾ 10 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕೆ.ಆರ್. ಪುರದಲ್ಲಿ ವಾಸವಿದ್ದ ದಂಪತಿಗೆ
ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಜಗಳದಿಂದ ಇತ್ತೀಚೆಗೆ ಮನೆ ತೊರೆದಿದ್ದ ನಿರ್ಮಲಾ ಅವರು ತಮ್ಮ ತವರುಮನೆಯಲ್ಲಿ ಉಳಿದುಕೊಂಡಿದ್ದರು’ ಎಂದು ತಿಳಿಸಿದರು.
‘ಇತ್ತೀಚೆಗೆ ಅಪಘಾತವೊಂದರಲ್ಲಿ ನಿರ್ಮಲಾ ಗಾಯಗೊಂಡಿದ್ದರು. ಅವರನ್ನು ಮಾತನಾಡಿಸಲು ಮನೆಗೆ ಹೋಗಿದ್ದ ವಿನೋದ್‌ಕುಮಾರ್, ಶೌಚಾಲಯದಲ್ಲಿ ಇರಿಸಿದ್ದ ಫಿನಾಯಿಲ್ ಕುಡಿದಿದ್ದರು. ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾ ಗಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿ ಸಲಾಗಿದೆ’ ಎಂದು ಹೇಳಿದರು.
ಪತ್ನಿ ವಿರುದ್ಧ ಪೋಷಕರ ದೂರು:
‘ಬೇರೆ ವ್ಯಕ್ತಿ ಜೊತೆ ಸಲುಗೆ ಇಟ್ಟುಕೊಂಡಿದ್ದ ಪತ್ನಿ, ವಿನೋದ್ ಕುಮಾರ್ ಅವರಿಗೆ ಕಿರುಕುಳ ನೀಡುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಪತಿಗೆ ವಿಷ ಕುಡಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ. ವಿನೋದ್ ಸಾವಿಗೆ ಆತನ ಪತ್ನಿ ಕಾರಣ’ ಎಂಬುದಾಗಿ ವಿನೋದ್ ಅವರ ಪೋಷಕರು ದೂರು ನೀಡಿದ್ದಾರೆ. ಈ ಆಯಾಮದಲ್ಲೂ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.