ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ರಾಜ್ಯದಾದ್ಯಂತ ಜಾರಿಗೊಳಿಸಿರುವ ಡಿಜಿಟಲ್ ಇ ಸ್ಟ್ಯಾಂಪ್ ಕುರಿತ ತರಬೇತಿಯನ್ನು ಶಿವಾಜಿನಗರ ನೋಂದಣಿ ಜಿಲ್ಲಾ ವ್ಯಾಪ್ತಿಯ ಎಲ್ಲ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಜ.9 ರಂದು ಬೆಳಿಗ್ಗೆ 11.30 ರಿಂದ ಶಿವಾಜಿನಗರ ಹಾಗೂ ಮಧ್ಯಾಹ್ನ 3ರಿಂದ ಹಲಸೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ತರಬೇತಿ ನಡೆಯಲಿದೆ. ಜ.12ರಂದು ಬೆಳಿಗ್ಗೆ 11.30 ರಿಂದ ಕೆ.ಆರ್.ಪುರ, ಮಧ್ಯಾಹ್ನ 3ರಿಂದ ವರ್ತೂರು ಉಪ ನೋಂದಣಾಧಿಕಾರಿ ಕಚೇರಿ, ಜ. 13ರಂದು ಬೆಳಿಗ್ಗೆ 11.30ರಿಂದ ಮಹದೇವಪುರ, ಮಧ್ಯಾಹ್ನ 3 ರಿಂದ ಬಿದರಹಳ್ಳಿ ಉಪ ನೋಂದಣಾಧಿಕಾರಿ ಕಚೇರಿ, ಜ.14ರಂದು ಬೆಳಿಗ್ಗೆ 11.30ರಿಂದ ಇಂದಿರಾನಗರ ಹಾಗೂ ಮಧ್ಯಾಹ್ನ 3ರಿಂದ ಬಾಣಸವಾಡಿ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ.

ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಹಾಗೂ ಎಸ್ಎಚ್ಐಎಲ್ಎಲ್ ಮೂಲಕ ಇ–ಸ್ಟ್ಯಾಂಪ್ ವಿತರಿಸುವ ಸಹಕಾರಿ ಸೌಹಾರ್ದ ಸಂಘಗಳ ಸಿಬ್ಬಂದಿ ಮತ್ತು ಆಸಕ್ತರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.