ಗುರುವಾರ , ಮೇ 26, 2022
27 °C

ನಿರ್ದೇಶಕ ನಾಗಶೇಖರ್‌ಗೆ ಮಹಿಳೆಯಿಂದ ವಂಚನೆ: ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತನಗೆ ಮನೆ ಮಾರುವುದಾಗಿ ಹೇಳಿ ಹಂತ ಹಂತವಾಗಿ ₹50 ಲಕ್ಷ ಹಣ ಪಡೆದಿದ್ದ ಮಹಿಳೆ ಈಗ ಬೇರೊಬ್ಬರಿಗೆ ಮನೆ ಮಾರಾಟ ಮಾಡಿದ್ದಾರೆ. ತನ್ನಿಂದ ಪಡೆದ ಹಣವನ್ನು ಈವರೆಗೂ ಹಿಂತಿರುಗಿಸಿಲ್ಲ’ ಎಂದು ಚಲನಚಿತ್ರ ನಿರ್ದೇಶಕ ನಾಗಶೇಖರ್‌ ಅವರು ರಾಜರಾಜೇಶ್ವರಿನಗರ ‍‍ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನ ಆಧಾರದಲ್ಲಿ ಪೊಲೀಸರು ರಾಜರಾಜೇಶ್ವರಿ ನಗರ ನಿವಾಸಿಗಳಾದ ಮೀನಾ ಹಾಗೂ ರಾಜ್‌ಕುಮಾರ್‌ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

‘ಆರ್‌.ಆರ್‌.ನಗರದ ಜಯಣ್ಣ ಲೇಔಟ್‌ನಲ್ಲಿ ಮನೆ ಖರೀದಿಸಲು ನಾಗಶೇಖರ್‌ ನಿರ್ಧರಿಸಿದ್ದರು. ಮೀನಾ ಮನೆ ನೀಡಲು ಒಪ್ಪಿದ್ದರು. ₹2.70 ಕೋಟಿಗೆ ಮನೆ ಖರೀದಿಸುವ ಕುರಿತು ಮಾತುಕತೆ ನಡೆದಿತ್ತು. 2020ರ ಆಗಸ್ಟ್‌ನಲ್ಲಿ ಖರೀದಿ ಒಪ್ಪಂದ ಮಾಡಿಕೊಂಡಿದ್ದ ನಾಗಶೇಖರ್‌ ಹಂತ ಹಂತವಾಗಿ ಮೀನಾ ಖಾತೆಗೆ ₹50 ಲಕ್ಷ ವರ್ಗಾಯಿಸಿದ್ದರು’ ಎಂದು ಪೊಲೀಸರು ಹೇಳಿದ್ದರು.

‘ಖರೀದಿ ಒಪ್ಪಂದದ ಬಳಿಕ ಮಹಿಳೆಯು ಮತ್ತೊಬ್ಬರಿಗೆ ಮನೆ ಮಾರಿದ್ದಳು. ನಾಗಶೇಖರ್‌ ಅವರಿಂದ ಪಡೆದಿದ್ದ ಮೊತ್ತವನ್ನೂ ಹಿಂತಿರುಗಿಸಿರಲಿಲ್ಲ. ದೂರು ದಾಖಲಾದ ಕೂಡಲೇ ವಂಚಕರಿಬ್ಬರೂ ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು