ಬೆಂಗಳೂರು: 'ಸಿನಿಮಾ ನಿರ್ಮಾಣ ಸಂಬಂಧ ನಿರ್ದೇಶಕ ಪ್ರೇಮ್ ಗೆ ₹ 10 ಲಕ್ಷ ಹಣ ನೀಡಿದ್ದೆ. ಕೇವಲ ₹ 5 ಲಕ್ಷ ವನ್ನು ಮಾತ್ರ ಹಿಂದಿರುಗಿಸಿದ್ದಾರೆ. ಉಳಿದ ಹಣ ನೀಡದೆ ವಂಚಿಸಿದ್ದಾರೆ' ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಆರೋಪಿಸಿದರು.

ಮಂಗಳವಾರ 'ತಾರಕಾಸುರ' ಚಿತ್ರದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂಬತ್ತು ವರ್ಷದ ಹಿಂದೆ ಹಣ ನೀಡಿದ್ದೆ. ಹಣಕ್ಕಾಗಿ ಅವರ ಮನೆಗೆ ಅಲೆದಾಡಿದ್ದೇನೆ. ಆದರೆ, ಅವರು ನನ್ನ ಮನವಿಗೆ ಸ್ಪಂದಿಸಲಿಲ್ಲ. ಸಾಕಷ್ಟು ಸತಾಯಿಸಿದ ಬಳಿಕ ಐದು ಲಕ್ಷ ರೂಪಾಯಿ ನೀಡಿದರು. ಉಳಿದ ಹಣವನ್ನು ಯಾವಾಗ ನೀಡುತ್ತಾರೋ ಗೊತ್ತಿಲ್ಲ ಎಂದರು.

ನಾನು ₹ 50 ಕೋಟಿ ಬಜೆಟ್ನ ಚಿತ್ರವನ್ನು ನಿರ್ದೇಶನ ಮಾಡುವುದಾಗಿ ಪ್ರೇಮ್ ಹೇಳಿಕೊಳ್ಳುತ್ತಾರೆ. ನನ್ನ ಹಣ ನೀಡಲು ಹಿಂದೇಟು ಹಾಕಲು ಕಾರಣ ಏನೆಂಬುದು ಗೊತ್ತಿಲ್ಲ. ಅವರನ್ನು ಸಿನಿಮಾ ಮಾಡಿಕೊಡಿ ಎಂದು ಮತ್ತೆ ಕೇಳುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.