ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕು ನಾಯಿ ವಿಚಾರಕ್ಕೆ ಗಲಾಟೆ

Published 4 ಫೆಬ್ರುವರಿ 2024, 17:55 IST
Last Updated 4 ಫೆಬ್ರುವರಿ 2024, 17:55 IST
ಅಕ್ಷರ ಗಾತ್ರ

ಬೆಂಗಳೂರು: ಜೀವನ್‌ ಬಿಮಾ ನಗರದ ಮನೆಯೊಂದರಲ್ಲಿ ಸಾಕು ನಾಯಿ ವಿಚಾರಕ್ಕೆ ಮನೆ ಮಾಲೀಕರು ಹಾಗೂ ಭೋಗ್ಯಕ್ಕೆ ವಾಸವಿದ್ದವರ ನಡುವೆ ಗಲಾಟೆ ನಡೆದು, ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ರಾಜೀ ಸಂಧಾನದ ಮೂಲಕ ಸುಖಾಂತ್ಯವಾಗಿದೆ.

ಪಂಜಾಬ್‌ನ ಪೂಜಾ ಅವರು ಕುಟುಂಬದೊಂದಿಗೆ ಜೀವನ್‌ ಬಿಮಾ ನಗರದ ಪ್ರಮೀಳಾ ಅವರ ಮನೆಯನ್ನು ಭೋಗ್ಯಕ್ಕೆ ಪಡೆದು ವಾಸವಾಗಿದ್ದರು. ಭೋಗ್ಯ ಮಾಡಿಕೊಳ್ಳುವ ವೇಳೆ ‘ಮನೆಯಲ್ಲಿ ನಾಯಿ ಸಾಕುವಂತೆ ಇಲ್ಲ’ ಎಂದು ಮಾಲೀಕರು ಹೇಳಿದ್ದರು. ಆದರೂ ಪೂಜಾ ಮನೆಯಲ್ಲಿ ನಾಯಿ ಸಾಕಿದ್ದರು. ಇದೇ ವಿಚಾರವಾಗಿ ಫೆ.2ರ ತಡರಾತ್ರಿ ಪೂಜಾ ಮತ್ತು ಪ್ರಮೀಳಾ ಮನೆಯವರ ನಡುವೆ ಪರಸ್ಪರ ಜಗಳ ನಡೆದು, ಹೊಡೆದಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

ಪೂಜಾ ಅವರು ಮನೆಯ ಮಾಲೀಕರಾದ ಪ್ರಮೀಳಾ ಹಾಗೂ ಅವರ ಸಹಚರರ ವಿರುದ್ಧ ಜೀವನ್‌ ಬಿಮಾ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಮನೆ ಮಾಲೀಕರಾದ ಪ್ರಮೀಳಾ ಅವರು ಬಾಡಿಗೆದಾರರಾದ ಪೂಜಾ ಹಾಗೂ ಅವರ ಕುಟುಂಬದ ವಿರುದ್ಧ ದೂರು ನೀಡಲು ಬಂದಿದ್ದರು. ಆಗ ಪೊಲೀಸರು ಎರಡೂ ಕಡೆಯವರನ್ನು ಕರೆಸಿ ವಿಚಾರಣೆ ನಡೆಸಿದರು.

ನಂತರ, ಇಬ್ಬರು ದೂರನ್ನು ವಾಪಸ್ ಪಡೆದರು. ‘ಎರಡು ಕಡೆಯವರಿಂದಲೂ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT