ಬುಧವಾರ, ನವೆಂಬರ್ 20, 2019
20 °C

ದುಬಾರಿ ಬೆಲೆಯ ಶ್ವಾನಗಳಿವು!

Published:
Updated:

ಮೈಸೂರು: ಕೆನೈನ್‌ ಕ್ಲಬ್ ಆಫ್ ಮೈಸೂರು ಭಾನುವಾರ ಇಲ್ಲಿ ಏರ್ಪಡಿಸಿದ್ದ ಶ್ವಾನ ಪ್ರದರ್ಶನದಲ್ಲಿ ದುಬಾರಿ ಬೆಲೆಯ ಹಾಗೂ ವಿಶ್ವದಲ್ಲೇ ಅಪರೂಪದ ತಳಿಯ ಶ್ವಾನಗಳು ಸೂಜಿಗಲ್ಲಿನಂತೆ ಸೆಳೆದವು.

ಇಂಡಿಯನ್ ಡಾಗ್‌ ಬ್ರೀಡರ್ಸ್ ಅಸೋಸಿಯೇಷನ್‌ ಅಧ್ಯಕ್ಷ ಸತೀಶ್‌ ಅವರು ಕೊರಿಯನ್ ಮ್ಯಾಸ್ಟಿಫ್ಸ್ ಹಾಗೂ ಲಯನ್‌ ಹೆಡ್‌ ಟಿಬೆಟನ್‌ ಮ್ಯಾಸ್ಟಿಫ್ಸ್ ತಳಿಯ ನಾಯಿಗಳನ್ನು ಪ್ರದರ್ಶಿಸಿದರು.

‘ಕೊರಿಯನ್ ಮ್ಯಾಸ್ಟಿಫ್ಸ್ ತಳಿಯ ಶ್ವಾನ ಸಿಗುವುದೇ ಅಪರೂಪ. ಇದರ ಬೆಲೆ ₹ 1 ಕೋಟಿ. ಲಯನ್‌ ಹೆಡ್‌ ಟಿಬೆಟನ್‌ ಮ್ಯಾಸ್ಟಿಫ್ಸ್ ತಳಿಯ ಶ್ವಾನವು ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿದ್ದು, ಇದರ ಬೆಲೆ ₹ 1 ಕೋಟಿಗೂ ಅಧಿಕ. ಈ ಎರಡನ್ನೂ ಬೀಜಿಂಗ್‌ನಿಂದ ತರಿಸಲಾಗಿದೆ’ ಎಂದು ಸತೀಶ್‌ ಹೇಳಿದರು.

ಪ್ರತಿಕ್ರಿಯಿಸಿ (+)