ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿ ಸ್ವೀಕಾರ ವಿಚಾರದಲ್ಲಿ ಗೊಂದಲ ಸೃಷ್ಟಿಸಬೇಡಿ: ಸುನಿಲ್‌ ಕುಮಾರ್‌

Published 22 ನವೆಂಬರ್ 2023, 5:33 IST
Last Updated 22 ನವೆಂಬರ್ 2023, 5:33 IST
ಅಕ್ಷರ ಗಾತ್ರ

ಬೆಂಗಳೂರು: ಜಾತಿ ಗಣತಿ ವರದಿ ಸ್ವೀಕಾರದ ವಿಚಾರದಲ್ಲಿ ದಿನಕ್ಕೊಂದು ನಿಲುವು ತಾಳುವುದನ್ನು ಮೊದಲು ನಿಲ್ಲಿಸಿ ಎಂದು ಕಾರ್ಕಳ ಬಿಜೆಪಿ ಶಾಸಕ ಸುನಿಲ್‌ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ.

‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸುವ ನನ್ನ ನಿರ್ಧಾರ ಅಚಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಾಮಾಜಿಕ ಮಾಧ್ಯಮದ ‘ಎಕ್ಸ್‌’ನಲ್ಲಿ ಪ್ರತಿಕ್ರಿಯೆ ನೀಡಿರುವ ಸುನಿಲ್‌ ಕುಮಾರ್‌, ನಿರ್ಧಾರ ಪ್ರತಿಪಾದಿಸುತ್ತಲೇ ನೀವು(ಸಿದ್ದರಾಮಯ್ಯ) ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ ಎಂದರು.

‘ಜಾತಿ ಗಣತಿ ವರದಿಯನ್ನು ಕೇವಲ ರಾಜಕೀಯ ಅಸ್ತ್ರವಾಗಿಸಿಕೊಂಡು ದಿನದೂಡುವ ಬದಲು ಸಾರ್ವಜನಿಕವಾಗಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯುವುದಕ್ಕಾದರೂ ಸರ್ಕಾರ ವೇದಿಕೆ ಸೃಷ್ಟಿಸಲಿ. ವರದಿಯ ವೈಜ್ಞಾನಿಕತೆಯ ಬಗ್ಗೆ ಸ್ಪಷ್ಟನೆ ಕೊಡಿ’ ಎಂದು ಹೇಳಿದರು.

‘ರಾಹುಲ್ ಗಾಂಧಿಯವರ ಹೇಳಿಕೆಯ‌ನ್ನು ಗುರಾಣಿಯಾಗಿಸಿಕೊಂಡು ನೀವು(ಸಿದ್ದರಾಮಯ್ಯ) ಸ್ವಪಕ್ಷೀಯರ ವಿರೋಧವನ್ನು ತಪ್ಪಿಸಿಕೊಳ್ಳಲು ಹವಣಿಸುತ್ತಿರಬಹುದು. ಆದರೆ, ಹಿಂದುಳಿದ ವರ್ಗ ಹಾಗೂ ಸಮಾಜದಲ್ಲಿ ಅನಪೇಕ್ಷಿತ ಗೊಂದಲ ಹಾಗೂ ಅನುಮಾನವನ್ನು ಸೃಷ್ಟಿಸಬೇಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT