ಬುಧವಾರ, ಏಪ್ರಿಲ್ 8, 2020
19 °C

‘ಟಿಬೆಟಿಯನ್ ಶಾಲೆಗಳಿಗೆ ಭಾಷಾ ವಿನಾಯಿತಿ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅರವತ್ತು ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರುವ ಟಿಬೆಟಿಯನ್ನರು ತಮ್ಮ ಶಾಲೆಗಳಲ್ಲಿ ಕನ್ನಡ ಕಲಿಸುವಿಕೆಗೆ ವಿನಾಯತಿ ಪಡೆಯುತ್ತಾ ಬಂದಿದ್ದಾರೆ. ಅಲ್ಪಸಂಖ್ಯಾತರಿಗೆ ಇಲ್ಲಿನ ಭಾಷೆಯಿಂದ ವಿನಾಯತಿ ನೀಡುತ್ತಾ ಹೋದಲ್ಲಿ ಕನ್ನಡ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಹಾಗಾಗಿ ಅವರ ಶಾಲೆಗೆ ಭಾಷಾ ವಿನಾಯಿತಿ ನೀಡಬಾರದು’ ಎಂದು ಕನ್ನಡ ಗೆಳೆಯರ ಬಳಗವು  ಸರ್ಕಾರಕ್ಕೆ ಒತ್ತಾಯಿಸಿದೆ. 

‘ಇಲ್ಲಿರುವ ಟಿಬೆಟಿಯನ್ ಶಾಲೆಗಳಲ್ಲಿ ಕೇಂದ್ರ ಭೋದನಾ ಪಠ್ಯಕ್ರಮವಿದ್ದು (ಐಸಿಎಸ್‍ಇ, ಸಿಬಿಎಸ್‍ಇ), 3ನೇ ಭಾಷೆಯ ಕಲಿಕೆಗೆ ಅವಕಾಶವಿಲ್ಲ. ಇಲ್ಲಿನ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ಟಿಬೆಟ್‍ಗೆ ಹೋದರೆ, ಅಲ್ಲಿ ಭಾಷೆಯ ತೊಡಕಾಗುತ್ತದೆ ಎಂಬ ಟಿಬೆಟ್‍ನ ಶಿಕ್ಷಣ ಸಚಿವರ ನಿಲುವು ಅಪಾಯಕಾರಿ. ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವ ‘ಕನ್ನಡ ಭಾಷಾ ಕಲಿಕಾ ಅಧಿನಿಯಮ-2015’ ಕೂಡ ಅರ್ಥ ಕಳೆದುಕೊಳ್ಳಲಿದೆ. ಹಾಗಾಗಿ ಸರ್ಕಾರ ಅವಕಾಶ ನೀಡಬಾರದು’ ಎಂದು ಸಂಚಾಲಕ ರಾ.‌ನಂ. ಚಂದ್ರಶೇಖರ್ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)