ದೂರದರ್ಶನಕ್ಕೆ ಆಯೋಗದ ಎಚ್ಚರಿಕೆ

ಭಾನುವಾರ, ಏಪ್ರಿಲ್ 21, 2019
32 °C

ದೂರದರ್ಶನಕ್ಕೆ ಆಯೋಗದ ಎಚ್ಚರಿಕೆ

Published:
Updated:

ನವದೆಹಲಿ: ಯಾವುದೇ ಪಕ್ಷಗಳ ಪರ ಪ್ರಚಾರಕ್ಕೆ ಆದ್ಯತೆ ನೀಡುವಲ್ಲಿ  ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ದೂರದರ್ಶನಕ್ಕೆ  ಮಂಗಳವಾರ ಸೂಚಿಸಿದೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ. 

ಪ್ರಧಾನಿ ಮೋದಿ ಅವರ ‘ಮೇ ಭಿ ಚೌಕೀದಾರ್‘ ಕಾರ್ಯಕ್ರಮ ಸಂಬಂಧ ದೂರದರ್ಶನಕ್ಕೆ ಇತ್ತೀಚೆಗೆ ಆಯೋಗ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು. ಈ ಕಾರ್ಯಕ್ರಮಕ್ಕೆ 1 ತಾಸು ನೀಡಿದ್ದನ್ನು ವಿರೋಧಿಸಿ ವಿರೋಧಪಕ್ಷಗಳು ದೂರು ನೀಡಿದ್ದವು. ಸುದ್ದಿಗೆ ನಿಗದಿಯಾದ ಸಮಯದಲ್ಲಿ ಯಾವುದೇ ಪಕ್ಷಗಳ ನಡುವೆ ತಾರತಮ್ಯ ಮಾಡಬಾರದು ಎಂದು ಆಯೋಗ ನಿರ್ದೇಶಿಸಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !