ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಡ್ರಗ್ಸ್ ಪಾರ್ಟಿ: ಬಾಲಿವುಡ್ ನಟ ಸಿದ್ದಾಂತ್‌ ಕಪೂರ್ ಸೇರಿ ಐವರು ವಶಕ್ಕೆ

Last Updated 13 ಜೂನ್ 2022, 7:23 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್‌ ಸೇವನೆ ಆರೋಪದಲ್ಲಿಬಾಲಿವುಡ್‌ ನಟ ಶಕ್ತಿ ಕಪೂರ್‌ ಅವರ ಮಗ ಸಿದ್ದಾಂತ್‌ ಕಪೂರ್‌ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಂ.ಜಿ.ರಸ್ತೆ ಟ್ರಿನಿಟಿ ವೃತ್ತದ ಸಮೀಪ ಇರುವ 'ದಿ ಪಾರ್ಕ್‌ ಹೋಟೆಲ್‌'ನಲ್ಲಿ ಹಲಸೂರು ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿ, ಡ್ರಗ್ಸ್‌ ಸೇವನೆ ಆರೋಪದ ಮೇಲೆ ಸಿದ್ದಾಂತ್‌ ಸೇರಿ ಐದು ಜನರನ್ನು ವಶಕ್ಕೆ ಪಡೆದಿದ್ದಾರೆ.

ಪಂಚತಾರಾ ಹೋಟೆಲ್‌ನಲ್ಲಿ ನಡೆಯುತ್ತಿರುವ ಪಾರ್ಟಿಯಲ್ಲಿ ಭಾಗಿಯಾಗಿರುವವರಿಗೆಡ್ರಗ್ಸ್‌ ಪೂರೈಕೆಯಾಗುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹಲಸೂರು ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ನೇತೃತ್ವದಲ್ಲಿ ದಾಳಿ ನಡೆದಿದೆ.

ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುಮಾರು 35 ಮಂದಿ ಮಹಿಳೆಯರು ಮತ್ತು ಪುರುಷರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

'ಮಾಹಿತಿ ಮೇರೆಗೆ ಹೋಟೆಲ್ ಮೇಲೆ ದಾಳಿ ಮಾಡಲಾಗಿದೆ. 35 ಜನರು ಪಾರ್ಟಿಯಲ್ಲಿದ್ದರು. ಡ್ರಗ್ಸ್ ಸೇವಿಸಿದ ಶಂಕೆ ಮೇರೆಗೆ ಅವರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ' ಎಂದು ಪೂರ್ವ ವಿಭಾಗದ ಡಿಸಿಪಿ‌ ಭೀಮಾಶಂಕರ ಗುಳೇದ್ ತಿಳಿಸಿದರು.

'ನಟ ಸಿದ್ದಾಂತ್‌ ಕಪೂರ್ ಸೇರಿ ಐವರ ವೈದ್ಯಕೀಯ ವರದಿ ಬಂದಿದ್ದು, ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದೆ. ಅವರನ್ನು ವಶಕ್ಕೆ‌ ಪಡೆಯಲಾಗಿದೆ. ಅವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದೂ ಹೇಳಿದರು.

ಹೋಟೆಲ್‌ನಲ್ಲಿ ತೆಗೆದ ಸಿದ್ದಾಂತ್‌ ಚಿತ್ರ
ಹೋಟೆಲ್‌ನಲ್ಲಿ ತೆಗೆದ ಸಿದ್ದಾಂತ್‌ ಚಿತ್ರ

ಆ ಪೈಕಿ ಐದು ಜನರು ಡ್ರಗ್ಸ್‌ ಸೇವಿಸಿರುವುದು ಪರೀಕ್ಷೆಯ ಫಲಿತಾಂಶದಿಂದ ಪತ್ತೆಯಾಗಿದೆ. ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆಯಡಿ, 1985 (ಎನ್‌ಡಿಪಿಎಸ್‌) ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ಪಾರ್ಟಿಯ ಡಿಜೆ ಅನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅವರು ಮುಂಬೈ ಮೂಲದವರು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT