ಬೆಂಗಳೂರು: ಬಸ್ನಲ್ಲಿ ಮಾದಕ ವಸ್ತು ತಂದು ಮಾರುತ್ತಿದ್ದವರ ಬಂಧನ

ಬೆಂಗಳೂರು: ಬಸ್, ರೈಲು ಮೊದಲಾದ ಸಾರ್ವಜನಿಕ ಸಾರಿಗೆ ಮೂಲಕ ಹೊರ ರಾಜ್ಯಗಳಿಂದ ಮಾದಕ ವಸ್ತುಗಳನ್ನು ತಂದು ನಗರದ ವಿವಿಧ ಭಾಗಗಳಲ್ಲಿ ಮಾರಾಟ ಮಾಡಲು ಮುಂದಾಗಿದ್ದ ಅಂತರರಾಜ್ಯದ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 5.ಕೆ.ಜಿ. ಹಷಿಶ್ ಆಯಿಲ್ ಹಾಗೂ 1.5 ಕೆ.ಜಿ.ಗಾಂಜಾ ಸೇರಿ ₹5 ಕೋಟಿ ಮೌಲ್ಯದ ಮಾದಕ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ
‘ವಿಶಾಖಪಟ್ಟಣದ ಪ್ರಕಾಶ್ (32) ಹಾಗೂ ಧ್ಯಾಮರಾಜ್ (22) ಬಂಧಿತರು.
‘ಆರೋಪಿಗಳು ಆಗಾಗ ನಗರಕ್ಕೆ ಬಂದು ಮಾದಕ ವಸ್ತುಗಳನ್ನು ಮಾರಾಟ ಮಾಡಿ ಹೋಗುತ್ತಿದ್ದರು. ಮೈಕೋ ಲೇಔಟ್ನ ಎಸ್ಎನ್ಎನ್ ವಸತಿ ಸಮುಚ್ಚಯ ರಸ್ತೆಯ ಸಮೀಪ ಅಪರಿಚಿತರು ಗ್ರಾಹಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಮಂಗಳವಾರ ಮಾಹಿತಿ ಲಭಿಸಿತ್ತು. ಇದರ ಆಧಾರದಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಕಾಲೇಜು ವಿದ್ಯಾರ್ಥಿಗಳು ಹಾಗೂ ಐ.ಟಿ ಕಂಪನಿಯ ಉದ್ಯೋಗಿಗಳಿಗೆ ಗಾಂಜಾ ಮತ್ತು ಹಷಿಶ್ ಆಯಿಲ್ ಮಾರುತ್ತಿದ್ದ ಅವರು ಅದರಿಂದ ಬಂದ ಹಣದಿಂದ ಐಷಾರಾಮಿ ಬದುಕು ನಡೆಸುತ್ತಿದ್ದರು ಎಂಬ ಮಾಹಿತಿಯನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ’ ಎಂದು ಅವರು ಹೇಳಿದರು.
ಬಂಧಿತರನ್ನು ಮೈಕೋ ಲೇಔಟ್ ಠಾಣೆಯ ಪೊಲೀಸರ ಸಾಧನೆಯನ್ನು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಶ್ಲಾಘಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.