ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪ್ಪಲಿಯಲ್ಲಿ ಡ್ರಗ್ಸ್; ಜಾಲ ಭೇದಿಸಿದ ಕಸ್ಟಮ್ಸ್

Last Updated 5 ನವೆಂಬರ್ 2020, 19:13 IST
ಅಕ್ಷರ ಗಾತ್ರ

ಬೆಂಗಳೂರು: ಭದ್ರತಾ ಪಡೆಗಳ ಕಣ್ತಪ್ಪಿಸಿ ಚಪ್ಪಲಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಣೆ ಮಾಡುತ್ತಿದ್ದ ಜಾಲವನ್ನು ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದು, ₹36.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

‘ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ದಕ್ಷಿಣ ಆಫ್ರಿಕಾ ಹಾಗೂ ಪಶ್ಚಿಮ ಆಫ್ರಿಕಾದಿಂದ ಬಂದಿದ್ದ ಪೊಟ್ಟಣಗಳಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

‘ಐದು ಜೊತೆ ಚಪ್ಪಲಿಗಳನ್ನು ಸಾಗಿಸಲಾಗುತ್ತಿತ್ತು. ಅವುಗಳನ್ನು ಪರಿಶೀಲಿಸಿದಾಗ, ಹೊಸ ಚಪ್ಪಲಿಯೆಂದು ಆರೋಪಿ ಹೇಳಿದ್ದ. ಅನುಮಾನಗೊಂಡು ಚಪ್ಪಲಿ ಬಿಚ್ಚಿ ನೋಡಿದಾಗ ಡ್ರಗ್ಸ್ ಸಿಕ್ಕಿದೆ. ₹12 ಲಕ್ಷ ಮೌಲ್ಯದ 241 ಗ್ರಾಂ ಡ್ರಗ್ಸ್ ಇದಾಗಿದೆ’ ಎಂದೂ ಮೂಲಗಳು ಹೇಳಿವೆ.

‘ಇನ್ನೊಂದು ಪ್ರಕರಣದಲ್ಲಿ, ಕಿವಿಯಲ್ಲಿ ಹಾಕಿಕೊಳ್ಳುವ ಚಿಕ್ಕ ಗಾತ್ರದ ಹತ್ತಿ ಉಂಡೆಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು. ತಪಾಸಣೆ ನಡೆಸಿದಾಗ ₹24.50 ಲಕ್ಷ ಮೌಲ್ಯದ 490 ಗ್ರಾಂ ಡ್ರಗ್ಸ್ ಸಿಕ್ಕಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT