ಬುಧವಾರ, ಮೇ 25, 2022
28 °C

ಬೆಂಗಳೂರು: ಬ್ಯಾಗ್‌ನಲ್ಲಿದ್ದ ₹ 5.30 ಕೋಟಿ ಮೌಲ್ಯದ ಡ್ರಗ್ಸ್ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದಾಖಲೆಗಳ ಬ್ಯಾಗ್‌ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ₹ 5.30 ಕೋಟಿ ಮೌಲ್ಯದ ಮಾದಕ ವಸ್ತುವನ್ನು (ಡ್ರಗ್ಸ್) ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ದುಬೈನಿಂದ ಕೋರಿಯರ್ ಮೂಲಕ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಜ. 22ರಂದು ಬ್ಯಾಗ್ ಬಂದಿತ್ತು. ದಾಖಲೆಗಳ ಬ್ಯಾಗ್ ಎಂಬು ದಾಗಿ ಅದರ ಮೇಲೆ ನಮೂದಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಬ್ಯಾಗ್ ಪರಿಶೀಲಿಸಿದಾಗ ಡ್ರಗ್ಸ್ ಪತ್ತೆಯಾಯಿತು’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

‘ಬ್ಯಾಗ್‌ನ ಸುತ್ತಲಿನ ಬಟ್ಟೆಯೊಳಗೆ ಡ್ರಗ್ಸ್ ಪುಡಿಯನ್ನು ತುಂಬಲಾಗಿತ್ತು. ಯಾರಿಗೂ ಕಾಣದಂತೆ, ಅದಕ್ಕೆ ಹೊದಿಕೆ ಇತ್ತು. ಹೊರಗಡೆಯಿಂದ ನೋಡಿದಾಗ ಡ್ರಗ್ಸ್ ಬಗ್ಗೆ ಯಾವುದೇ ಸುಳಿವು ಸಿಗುತ್ತಿರಲಿಲ್ಲ. ಲೋಹ ಶೋಧಕದಲ್ಲಿ ಪರಿಶೀಲಿಸಿದಾಗ, ಬ್ಯಾಗ್‌ನಲ್ಲಿ ಅನುಮಾ ನಾಸ್ಪದ ವಸ್ತು ಇರುವುದು ಗೊತ್ತಾಗಿತ್ತು.’

‘ಬ್ಯಾಗ್‌ ವಶಕ್ಕೆ ಪಡೆದು, ಸುತ್ತಲಿನ ಬಟ್ಟೆ ತೆರೆದು ನೋಡಿದಾಗ ಡ್ರಗ್ಸ್ ಸಿಕ್ಕಿತು. ಬ್ಯಾಗ್‌ ಬಂದಿದ್ದ ವಿಳಾಸದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು