ತಮಿಳುನಾಡಿನ ಈತ, ನಗರದಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದ. ಯಲಹಂಕ 4ನೇ ಹಂತದ ನಿವಾಸಿಯಾದ 40 ವರ್ಷದ ಮಹಿಳೆ, ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮನೆ ಎದುರಿನ ಪಾರ್ಕ್ನಲ್ಲಿ ವಾಯುವಿಹಾರ ಮಾಡುತ್ತಿದ್ದರು.
ಈ ವೇಳೆ ಅಲ್ಲಿಗೆ ಬಂದ ಆರೋಪಿ, ಅವರನ್ನು ತಬ್ಬಿಕೊಂಡಿದ್ದಾನೆ. ಮಹಿಳೆ ಚೀರಿಕೊಳ್ಳುತ್ತಿದ್ದಂತೆಯೇ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಆತನಿಗೆ ಥಳಿಸಿ ಪೊಲೀಸರ ಸುಪರ್ದಿಗೆ ಕೊಟ್ಟಿದ್ದಾರೆ.