ಬುಧವಾರ, ಆಗಸ್ಟ್ 4, 2021
22 °C

ನಕಲಿ ಪ್ರಮಾಣ ಪತ್ರ: ಎಫ್‌ಐಆರ್‌ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫಿಸಿಯೋಥೆರಪಿ ಪದವಿ ಕೋರ್ಸ್‌ (ಬಿಪಿಟಿ) ಸೇರಲು ದ್ವಿತೀಯ ಪಿಯುಸಿ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ ಆರೋಪದಲ್ಲಿ ತಂದೆ ಮತ್ತು ಮಗಳ ವಿರುದ್ಧ ತಿಲಕನಗರ ಠಾಣೆಗೆ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪ ಕುಲಸಚಿವರು ದೂರು ನೀಡಿದ್ದಾರೆ.

ಹಾಸ್ಮಾಟ್‌ ಹಾಸ್ಪಿಟಲ್‌ ಎಜುಕೇಷನ್‌ ಇನ್‌ಸ್ಟಿಟ್ಯೂಟ್‌, ಕಾಲೇಜ್‌ ಆಫ್‌ ಫಿಸಿಯೋಥೆರಪಿ ಸಂಸ್ಥೆಯ ಪ್ರಾಂಶುಪಾಲ, ಕಲ್ಯಾಣ ನಗರದ ನಿವಾಸಿ ಸೆಂಥಿಲ್‌ ಕುಮಾರ್ ಮತ್ತು ಅವರ ಪುತ್ರಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇಂಡೋ ಏಷಿಯಾ ಅಕಾಡೆಮಿಕ್‌ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸೆಂಥಿಲ್‌ ಅವರ ಮಗಳು, 2015ರ ಮಾರ್ಚ್‌ ತಿಂಗಳಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಆದರೆ, ಮಹಾರಾಷ್ಟ್ರದ ಮಾಧ್ಯಮಿಕ ಶಿಕ್ಷಾ ಪರಿಷತ್‌ನ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ ಪರೀಕ್ಷೆಯಲ್ಲಿ ಮಗಳು ಪಾಸಾಗಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅದರ ಆಧಾರದಲ್ಲಿ ಹೊಸಮಠ್‌ ಕಾಲೇಜಿನಲ್ಲಿ ಬಿಪಿಟಿ ಕೋರ್ಸ್‌ಗೆ ಸೇರಿಸಿರುವುದಾಗಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಸೆಂಥಿಲ್‌ ಪತ್ರ ನೀಡಿದ್ದರು. ಪರಿಶೀಲನೆ ವೇಳೆ ಪ್ರಮಾಣಪತ್ರ ನಕಲಿ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ, ಉಪ ಕುಲಸಚಿವರು ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು