ಗುರುವಾರ , ಜೂನ್ 24, 2021
23 °C

ಈದ್‌: 5 ಸಾವಿರ ಮಂದಿಗೆ ಬಿರಿಯಾನಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರಿನ ಮುಸ್ಲಿಂ ಯುವಕರು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ 5 ಸಾವಿರಕ್ಕೂ ಅಧಿಕ ಮಂದಿಗೆ ಬಿರಿಯಾನಿ ಹಂಚುವ ಮೂಲಕ ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ಆಚರಿಸಿದ್ದಾರೆ.

ಮುಸ್ಲಿಂ ಯುವಕರಾದ ಹಫೀಜ್‌ ಸೇಠ್‌, ಉಸ್ಮಾನ್‌ ಷರೀಫ್‌, ಇಬ್ರಾಹಿಂ ಅಕ್ರಂ ಹಾಗೂ ಇತರ ಸ್ವಯಂಸೇವಕರು ಸೇರಿ ಕರೋಲ್‌ ಫೌಂಡೇಷನ್‌ ಆಶ್ರಯದಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಕೊರೊನಾ ಯೋಧರಿಗೆ ಹಾಗೂ ಬಡವರಿಗೆ ಬಿರಿಯಾನಿ ಹಾಗೂ ಹಣ್ಣಿನ ರಸದ ಪೊಟ್ಟಣಗಳನ್ನು ಜಾತಿ, ಧರ್ಮದ ಭೇದ ಮಾಡದೇ ಹಂಚಿದರು.

‘ಕೋವಿಡ್‌ ಯೋಧರು, ಈ ಸೋಂಕು ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರು, ಬಿಬಿಎಂಪಿ ನೌಕರರು, ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಹಾಗೂ ವಲಸೆ ಕಾರ್ಮಿಕರಿಗೆ ಬಿರಿಯಾನಿ ಹಂಚುವ ಮೂಲಕ ಹಬ್ಬ ಆಚರಿಸಿದ್ದೇವೆ. ದೇಶದ ಏಕತೆ, ಕೋಮು ಸಾಮರಸ್ಯ ಮತ್ತು ಜಾತ್ಯತೀತತೆ ಎತ್ತಿ ಹಿಡಿಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅವಕಾಶ ವಂಚಿತರಿಗೆ ಹಾಗೂ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಖುಷಿಯನ್ನೆಲ್ಲ ಮರೆತು ಇತರರ ಸೇವೆಗಾಗಿ ಪಣ ತೊಟ್ಟವರಿಗೂ ಹಬ್ಬದ ಖುಷಿ ಸಿಗಬೇಕು ಎಂಬುದು ನಮ್ಮ ಆಶಯ’ ಎಂದು ಉಸ್ಮಾನ್‌ ಷರೀಫ್‌ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು