ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಉಳಿಸಿ’ ಅಭಿಯಾನ

Published 17 ಮೇ 2024, 16:50 IST
Last Updated 17 ಮೇ 2024, 16:50 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ಪುರದ ಬಳಿಯಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯಲ್ಲಿ ತ್ಯಾಜ್ಯ ತುಂಬಿದ್ದು, ದಿನೇದಿನೇ ಹಾಳಾಗುತ್ತಿದೆ. ಈ ಕೆರೆಯ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿರುವ ಸ್ಥಳೀಯ ನಾಗರಿಕರು, ‘ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಉಳಿಸಿ’ ಅಭಿಯಾನ ಆರಂಭಿಸಿದ್ದಾರೆ.

ಮೇಡಹಳ್ಳಿ ರೈಸಿಂಗ್‌, ದ ಇಂಡಿಯನ್‌ ಪ್ಲಾಗರ್ಸ್‌ ಆರ್ಮಿ, ಫ್ರೆಂಡ್ಸ್‌ ಆಫ್ ಲೇಕ್ಸ್‌ ಹಾಗೂ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಸ್ವಯಂಸೇವಕರ ವತಿಯಿಂದ ಮೇ 25ರಂದು ಸ್ವಚ್ಛತಾ ಕಾರ್ಯವನ್ನು ಆಯೋಜಿಸಲಾಗಿದೆ.

ಎಲೆ ಮಲ್ಲಪ್ಪ ಶೆಟ್ಟಿ ಕೆರೆಯನ್ನು ಪ್ಲಾಸ್ಟಿಕ್‌ ರಹಿತ, ಕಸರಹಿತ, ಮಿಶ್ರತ್ಯಾಜ್ಯರಹಿತವನ್ನಾಗಿ ಮಾಡಲು ಸ್ವಚ್ಛತಾ ಕಾರ್ಯ ಒಂದು ಹೆಜ್ಜೆಯಾಗಿದೆ ಎಂದು ಪ್ಲಾಗ್‌ ರಾಜ್‌, ಸುಭಾಜಿತ್‌, ಮಾಧುರಿ ತಿಳಿಸಿದ್ದಾರೆ.

‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಆದೇಶವಿದೆ, ಸ್ಥಳೀಯರೂ ಹೋರಾಟ ನಡೆಸುತ್ತಿದ್ದಾರೆ. ಇಷ್ಟಾದರೂ ಕೆರೆಯಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತ ಗಮನಹರಿಸುತ್ತಿಲ್ಲ. ನೂರಾರು ವರ್ಷಗಳ ಇತಿಹಾಸವಿರುವ 490 ಎಕರೆ ವಿಸ್ತೀರ್ಣದಲ್ಲಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಒತ್ತುವರಿ, ಮಾಲಿನ್ಯದಿಂದ ನಲುಗುತ್ತಿದೆ. ಈ ಕೆರೆಯನ್ನು ಉಳಿಸಿ, ಸಂರಕ್ಷಿಸಲು ಸ್ಥಳೀಯ ಜನರು, ಸಂಘ–ಸಂಸ್ಥೆಗಳು ಹೋರಾಡುತ್ತಿವೆ’ ಎಂದಿದ್ದಾರೆ. ಸಂಪರ್ಕ: 86184 95574

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT