ಮಂಗಳವಾರ, ಫೆಬ್ರವರಿ 18, 2020
21 °C

ಆಸ್ಪತ್ರೆಯ ಎಸ್‌ಟಿಪಿಯಲ್ಲಿ ಭ್ರೂಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಹೆಬ್ಬಾಳ ಬಳಿಯ ಆಸ್ಟರ್ ಸಿಎಂಐ ಆಸ್ಪತ್ರೆಯ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ (ಎಸ್‌ಟಿಪಿ) 4 ತಿಂಗಳ ಭ್ರೂಣ ಪತ್ತೆಯಾಗಿದ್ದು, ಆ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿತೇಶ್ ಶೆಟ್ಟಿ ಅವರು ದೂರು ನೀಡಿದ್ದಾರೆ. ಭ್ರೂಣ ಅಥವಾ ಶಿಶುವನ್ನು ಬಿಸಾಡಿದ ಆರೋಪದಡಿ (ಐಪಿಸಿ 318) ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಲಸಗಾರ ಯೋಗೇಶ್‌ ಎಂಬುವರು ಇದೇ 5ರಂದು ಬೆಳಿಗ್ಗೆ ಆಸ್ಪತ್ರೆಯ ಎಸ್‌ಟಿಪಿ ಸ್ವಚ್ಛ ಮಾಡುತ್ತಿದ್ದರು. ಅದೇ ಸಂದರ್ಭದಲ್ಲೇ 300 ಗ್ರಾಂ ತೂಕದ ಗಂಡು ಮಗುವಿನ ಭ್ರೂಣ ಕಂಡಿತ್ತು’ ಎಂದರು.

‘ಮಗುವಿನ ಜನನವನ್ನು ಮುಚ್ಚಿಡುವ ಸಲುವಾಗಿ ಯಾರೋ ಭ್ರೂಣವನ್ನು ಎಸ್‌ಟಿಪಿಯಲ್ಲಿ ಎಸೆದಿದ್ದಾರೆ. ಸದ್ಯ ಭ್ರೂಣವನ್ನು ಶವಾಗಾರದಲ್ಲಿ ಇರಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು