ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆಗೋಡೆ ನಿರ್ಮಾಣಕ್ಕೆ ತುರ್ತು ಕಾಮಗಾರಿ: ಮೇಯರ್ ಎಂ. ಗೌತಮ್‌ಕುಮಾರ್

Last Updated 26 ಜೂನ್ 2020, 15:12 IST
ಅಕ್ಷರ ಗಾತ್ರ

ಬೆಂಗಳೂರು: ‘ವೃಷಭಾವತಿ ಕಾಲುವೆ ತಡೆಗೋಡೆ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಗೋಡೆ ನಿರ್ಮಾಣಕ್ಕೆ ತುರ್ತು ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಲಾಗಿದೆ’ ಎಂದು ಮೇಯರ್ ಎಂ. ಗೌತಮ್‌ಕುಮಾರ್ ತಿಳಿಸಿದರು.

ಕೆಂಗೇರಿ ಬಳಿ ತಡೆಗೋಡೆ ಕುಸಿದಿದ್ದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಮೇಯರ್, ‘ದಶಕಗಳ ಹಿಂದೆ ನಿರ್ಮಾಣಗೊಂಡ ತಡೆಗೋಡೆ ಇದು. ರಸ್ತೆ ಕಾಮಗಾರಿ ನಿರ್ವಹಿಸುವಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಳೆ ತಡೆಗೋಡೆಯ ಸಾಮರ್ಥ್ಯ ಪರಿಶೀಲಿಸದೆ ಅದರ ಮೇಲೆಯೇ ಹೊಸದಾಗಿ ಗೋಡೆ ನಿರ್ಮಿಸಿದ್ದಾರೆ. ಜೋರು ಮಳೆ ಬಂದಾಗ ನೀರು ಹೆಚ್ಚಾಗಿ ಗೋಡೆ ಕುಸಿದಿದೆ’ ಎಂದರು.

‘ರಸ್ತೆ ಸ್ವಲ್ಪಭಾಗ ಹಾಳಾಗಿದ್ದು, ವಾಹನಗಳಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.ರಸ್ತೆ ಇನ್ನಷ್ಟು ಕುಸಿಯದಂತೆ ಮರಳು ಮೂಟೆಗಳನ್ನು ಜೋಡಿಸಲಾಗುತ್ತಿದೆ. ನೀರಿನ ಹರಿವು ಮಾರ್ಗ ಬದಲಾಯಿಸಲಾಗುತ್ತಿದೆ’ ಎಂದು ಹೇಳಿದರು.

ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಮಾತನಾಡಿ, ‘ಮಳೆ ಜೋರಾಗಿದ್ದರಿಂದ ಹೀಗಾಗಿದೆ. ಇದಕ್ಕೆ ಯಾರನ್ನೂ ಹೊಣೆ ಮಾಡಲು ಆಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ವಿಭಾಗ ಮತ್ತು ನಮ್ಮ ಮೆಟ್ರೊ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT