ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಶೀಲ ಗುಣ ತರಬೇತಿಯಿಂದ ಮೊನಚುಗೊಳ್ಳಲಿ: ಕೆ.ಎನ್‌. ಜನಾರ್ದನ್‌

Published 21 ಮಾರ್ಚ್ 2024, 17:36 IST
Last Updated 21 ಮಾರ್ಚ್ 2024, 17:36 IST
ಅಕ್ಷರ ಗಾತ್ರ

ನೆಲಮಂಗಲ: ಅಂತರ್ಗತವಾಗಿರುವ ಉದ್ಯಮಶೀಲತೆಯ ಗುಣಗಳನ್ನು ತರಬೇತಿಯ ಮೂಲಕ ಮೊನಚುಗೊಳಿಸಿ ಅನುಷ್ಠಾನಕ್ಕೆ ತಂದಾಗ ಯಶಸ್ವಿ ಉದ್ಯಮಿಯಾಗಬಹುದು ಎಂದು ಕೂರ್ಗ್‌ ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯ ಕೆ.ಎನ್‌. ಜನಾರ್ದನ್‌ ತಿಳಿಸಿದರು.

ಅರಿಶಿನಕುಂಟೆಯ ರುಡ್‌ಸೆಟ್‌ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉದ್ಯಮಿಗಳಾಗುವ ಕನಸು ಹೊತ್ತ ಯುವಜನರಿಗೆ ರುಡ್‌ಸೆಟ್‌ ತರಬೇತಿ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವಿಸಿಎನ್‌ಆರ್‌ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ. ರಾಮಸ್ವಾಮಿ ಮಾತನಾಡಿ, ‘ಗ್ರಾಮೀಣ ನಿರುದ್ಯೋಗಿ ಯುವಕರನ್ನು ಉದ್ಯಮಿಗಳನ್ನಾಗಿ ರುಡ್‌ಸೆಟ್‌ ಮಾಡಿದೆ’ ಎಂದು ಶ್ಲಾಘಿಸಿದರು.

ರುಡ್‌ಸೆಟ್‌ ನಿರ್ದೇಶಕ ರವಿಕುಮಾರ್‌, ಉದ್ಯಮಿಗಳಾದ ಡೊರೆಟ್ಟಾ ಕ್ರಿಸ್ಟಾಬೆಲ್‌, ಮಂಜುನಾಥ್‌, ಸಿಬ್ಬಂದಿ ವಿದ್ಯಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT