ರಾಜರಾಜೇಶ್ವರಿನಗರ: ಹೇರೋಹಳ್ಳಿ, ದೊಡ್ಡ ಬಿದರಕಲ್ಲು ವಾರ್ಡ್ ಮತ್ತು ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆ ಸೇರಿದಂತೆ 17 ಶಾಲೆಗಳ ಮಕ್ಕಳು ಪರಿಸರ ಜಾಗೃತಿ ಮೂಡಿಸಿದರು.

ಹೇರೋಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಸರದ ಬಗ್ಗೆ ನಾಟಕ, ನೃತ್ಯ, ಜಾಗೃತಿ ಮೂಡಿಸುವ ಗೀತಾಗಾಯನ, ಅರಣ್ಯ, ಮರ, ಗಿಡ, ಕೆರೆ, ಕುಂಟೆ ನಾಶ, ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಟ ಪರಿಣಾಮ, ಮಲೀನ ನೀರು, ಆಹಾರ ಕಲಬರೆಕೆಯ ಬಗ್ಗೆ ಶಾಲಾ ಮಕ್ಕಳು ಮಾತನಾಡಿದರು.

ಶಾಸಕ ಎಸ್.ಟಿ.ಸೋಮಶೇಖರ್ ಅವರು ಹೇರೋಹಳ್ಳಿ ಕೆರೆ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಶ್ರೀಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮ, ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ಗೌಡ, ನಿವೃತ್ತ ಮುಖ್ಯ ಶಿಕ್ಷಕ ನಾಗರಾಜು, ಗ್ರಾ.ಪಂ ಅಧ್ಯಕ್ಷೆ ವಿನೋಧ ನರಸಿಂಹಮೂರ್ತಿ, ಪ್ರಕಾಶ್, ರೋಹಿಣಿ, ಆದಿತ್ಯ ರಮೇಶ್, ಎಂ.ಗಂಗರಾಜು, ನಿಖಿತ್ಗೌಡ, ಹೇಮ, ದೇವೇಗೌಡ, ಹನುಮಂತು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.