ಪರಿಸರ ಸ್ನೇಹಿ ಸ್ಟಾರ್ಟ್ಅಪ್ಗಳಿಗೆ ಪ್ರೋತ್ಸಾಹ: ರಾಜ್ಯಪಾಲ ಥಾವರ್

ಬೆಂಗಳೂರು: ‘ದೇಶ ಬೃಹತ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಕೇಂದ್ರ ಸರ್ಕಾರ ಪರಿಸರ ಸ್ನೇಹಿ ಚಿಂತನೆಗಳಿಗೆ ಮೇಕ್ ಇಂಡಿಯಾ ಉಪಕ್ರಮದ ಮೂಲಕ ಪ್ರೋತ್ಸಾಹಿಸುತ್ತಿದೆ’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.
ಸಿಎಂಆರ್ ವಿಶ್ವವಿದ್ಯಾಲಯ ಮತ್ತು ರ್ಯಾವರಣ್ ಗತಿವಿಧಿ ಅಂಡ್ ರೈನ್ಮ್ಯಾಟರ್ ಫೌಂಡೇಷನ್ ಸಹಯೋಗದಲ್ಲಿ ‘ಇವೈಎಸ್ಎಸ್–ಎಕೊ ಯೂತ್ ಸ್ಟಾರ್ಟ್ಅಪ್ ಸ್ಪರ್ಧೆ ಮತ್ತು ಶೃಂಗಸಭೆ–2022’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹವಾಮಾನ ವೈಪರೀತ್ಯದಂತಹ ತೊಂದರೆಗಳನ್ನು ಪರಿಹರಿಸಲು ನೆರವಾಗುವ ಪರಿಸರ ಸ್ನೇಹಿ ಸ್ಟಾರ್ಟ್ಅಪ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದುವುದು ಇಂದಿನ ಅಗತ್ಯವಾಗಿದೆ’ ಎಂದು ತಿಳಿಸಿದರು.
ಯುನೆಸ್ಕೊ ಎಂಜಿಐಇಪಿನ ಜಾಗತಿಕ ದಯಾ ರಾಯಭಾರಿ ರಿಕಿ ಕೇಜ್ ಮಾತನಾಡಿ, ‘ಹವಾಮಾನ ಬದಲಾವಣೆ, ಪ್ರಭೇದಗಳ ನಶಿಸುವಿಕೆ, ಅರಣ್ಯ ನಾಶ, ಪ್ಲಾಸ್ಟಿಕ್, ವಾಯು ಮಾಲಿನ್ಯ ನಿಯಂತ್ರಣಕ್ಕೆ ಸ್ಟಾರ್ಟ್ಅಪ್ಗಳ ಮೂಲಕ ಯುವಜನತೆ ಇದರ ನೇತೃತ್ವ ವಹಿಸಿರುವುದು ಶ್ವಾಘನೀಯ’ ಎಂದರು.
ಸಿಎಂಆರ್ ಸಂಸ್ಥೆಗಳ ಸಮೂಹದ ಅಧ್ಯಕ್ಷ ಕೆ.ಸಿ ರಾಮಮೂರ್ತಿ ಮಾತನಾಡಿ, ‘ಪರಿಸರಕ್ಕೆ ಸಂಬಂಧಿಸಿದಂತೆ ಸುಸ್ಥಿರ ಭವಿಷ್ಯಕ್ಕಾಗಿ ದೇಶದಲ್ಲಿ ಪರಿಸರ ವ್ಯವಸ್ಥೆಯೊಂದನ್ನು ಸೃಷ್ಟಿಸುವುದು ಈ ಶೃಂಗಸಭೆಯ ಉದ್ದೇಶ’ ಎಂದರು.
ಐಡಿಯಾ ವರ್ಗದಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪ್ರಥಮ ಪ್ರಶಸ್ತಿ ಪಡೆದುಕೊಂಡಿತು.
ದ್ವಿತೀಯ ಸ್ಥಾನವನ್ನು ಎಐ-ಜೆನ್ಝೆಡ್ ಪುದುಚೇರಿ ಮತ್ತು ಕೊಂಗುನಾಡು ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ತಿರುಚಿನಾಪಲ್ಲಿಗೆ ನೀಡಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.