ಗುರುವಾರ , ಅಕ್ಟೋಬರ್ 21, 2021
27 °C
ಪರಿಸರವಾದಿಗಳ ವಿರೋಧ: ಶಾಸಕರಿಗೆ ಪತ್ರ

‘ಬಾಲಬ್ರೂಯಿಯಲ್ಲಿ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾರಂಪರಿಕ ಕಟ್ಟಡ ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ ಆಗಿ ಪರಿವರ್ತಿಸುವ ಸರ್ಕಾರದ ನಿರ್ಧಾರಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಪರಿಸರ ಟ್ರಸ್ಟ್‌ ಅಧ್ಯಕ್ಷ ಯಲ್ಲಪ್ಪ ರೆಡ್ಡಿ, ಭಾರತೀಯ ಸಸ್ಯಶಾಸ್ತ್ರ ಸರ್ವೆ ಸಂಸ್ಥೆಯ ಮಾಜಿ ನಿರ್ದೇಶಕ ಎಂ. ಸಂಜಪ್ಪ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಡೀನ್‌ ಪ್ರೊ. ಬಾಲಕೃಷ್ಣ ಗೌಡ, ಐಐಎ ಮಾಜಿ ಅಧ್ಯಕ್ಷ ಪ್ರೊ. ಜೈಸಿಂಹ ಅವರು ಈ ಬಗ್ಗೆ ಶಾಸಕರಿಗೆ ಪತ್ರ ಬರೆದಿದ್ದಾರೆ.

ಕ್ಲಬ್‌ಗಾಗಿ ಹೆಚ್ಚುವರಿ ಮೂಲಸೌಕರ್ಯಗಳನ್ನು ಕಲ್ಪಿಸಲು ಮರಗಳನ್ನು ಕತ್ತರಿಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಲವು ಅಪರೂಪದ ಸಸಿಗಳನ್ನು ಆಯ್ಕೆ ಮಾಡಿ ಬಾಲಬ್ರೂಯಿ ಅತಿಥಿ ಗೃಹದ ಆವರಣದಲ್ಲಿ ನೆಟ್ಟಿದ್ದರು. ಇದರಿಂದಾಗಿ, ಇಂದು ಹಲವು ಅಪರೂಪದ ಮತ್ತು ಏಳು ದಶಕಕ್ಕೂ ಹೆಚ್ಚು ಹಳೆಯ ಮರಗಳು ಈ ಕಟ್ಟಡದ ಆವರಣದಲ್ಲಿವೆ. ಹೀಗಾಗಿ, ಈ ಪ್ರದೇಶವನ್ನು ಸಂರಕ್ಷಿಸುವ ಪ್ರಯತ್ನ ಮಾಡಬೇಕು. ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ಗೆ ವಿಧಾನಸೌಧದ ಬಳಿ ಪರ್ಯಾಯ ಸ್ಥಳವನ್ನು ಪರಿಶೀಲಿಸಲಿ ಎಂದು ಅವರು ಕೋರಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.