ಏಪ್ರಿಲ್ 20ರಂದು ಮಧ್ಯಾಹ್ನ ಓಂ ಪ್ರಕಾಶ್ ಅವರು ಊಟ ಮಾಡುತ್ತಿದ್ದರು. ಹೋಟೆಲ್‌ನಿಂದ ಮೀನು ಫ್ರೈ ತರಿಸಿಕೊಂಡಿದ್ದರು. ಅದೇ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಹತ್ಯೆ ಮಾಡಲಾಗಿತ್ತು. ಚಾಕು ಹಾಗೂ ಸ್ಕ್ರೂಡ್ರೈವರ್‌ನಿಂದ ಇರಿತಕ್ಕೆ ಒಳಗಾದ ಓಂ ಪ್ರಕಾಶ್ ಅವರು 15 ನಿಮಿಷ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದರು. ಪತಿ ಮೃತಪಟ್ಟಿರುವುದನ್ನು ಖಚಿತ ಪಡಿಸಿಕೊಂಡಿದ್ದ ಪಲ್ಲವಿ ಮೂರನೇ ಮಹಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು. ಅಲ್ಲದೇ ಓಂ ಪ್ರಕಾಶ್ ಅವರ ಮೇಲೆ ಖಾರದಪುಡಿ ಎರಚಿ ಬಳಿಕ ಅಡುಗೆ ಎಣ್ಣೆಯನ್ನೂ ಸುರಿಯಲಾಗಿತ್ತು. ಕೈ–ಕಾಲು ಕಟ್ಟಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ದೇಹದ 10 ಕಡೆ ಇರಿದ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆ ಆಗಿದ್ದವು ಎಂದು ಸಿಸಿಬಿ ಮೂಲಗಳು ತಿಳಿಸಿವೆ.