ವಿವಿಧ ಕಂಪನಿಗಳ ಡೆಲಿವರಿ ಹುಡುಗರನ್ನೇ ಗುರಿಯಾಗಿಸಿ ಆರೋಪಿಗಳು ಚಾಕು ಹಿಡಿದು ಅಡ್ಡಗಟ್ಟುತ್ತಿದ್ದರು. ಬಳಿಕ ಬೆದರಿಸಿ ಅವರ ಬಳಿಯಿರುವ ಊಟ, ತಿಂಡಿ, ಮೊಬೈಲ್ ಹಾಗೂ ದ್ವಿಚಕ್ರ ವಾಹನವನ್ನು ದೋಚಿಕೊಂಡು ಪರಾರಿ ಆಗುತ್ತಿದ್ದರು. ಆಗಸ್ಟ್ 4 ಮತ್ತು 21ರಂದು ಎಚ್ಎಎಲ್‍ನ ಕೋನೇನ ಅಗ್ರಹಾರದಲ್ಲಿ ಮಾರಕಾಸ್ತ್ರ ಹಿಡಿದು ಡೆಲಿವರಿ ಹುಡುಗರನ್ನು ದೋಚಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಸುಲಿಗೆಗೆ ಒಳಗಾದ ಉತ್ತರ ಭಾರತ ಮೂಲದ ಡೆಲಿವರಿ ಹುಡುಗರನ್ನು ಪತ್ತೆಹಚ್ಚಿ ದೂರು ಪಡೆದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.