ಶುಕ್ರವಾರ, ಜನವರಿ 24, 2020
16 °C

ರೈಲು ನಿಲ್ದಾಣದಲ್ಲಿ ಚಹರೆ ಪತ್ತೆ ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರೋಪಿಗಳು ಮತ್ತು ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಒಳಗೊಂಡ ಮುಖಚಹರೆ ಗುರುತಿಸುವ ತಂತ್ರಜ್ಞಾನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್‌) ರೈಲು ನಿಲ್ದಾನದಲ್ಲಿ ಫೆಬ್ರುವರಿಯಲ್ಲಿ ಜಾರಿಗೆ ಬರಲಿದೆ.

ಈಗಾಗಲೇ ಯಂತ್ರ ಅಳವಡಿಸಲಾಗಿದ್ದು, ರೈಲ್ವೆ ಪೊಲೀಸರಿಗೆ ಅನುಕೂಲ ಆಗುವಂತೆ ಕೆಲಸ ಮಾಡಲಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆ. ಅಪರಾಧಿಗಳು ರೈಲು ನಿಲ್ದಾಣ ಪ್ರವೇಶಿಸಿದ ಕೂಡಲೇ ಕೃತಕ ಬುದ್ಧಿಮತ್ತೆ ಸಹಾಯದಿಂದ ಗುರುತಿಸುವ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ.

ಈ ಯಂತ್ರ ಕಾರ್ಯಾರಂಭಕ್ಕೆ ಬೇಕಿರುವ ಅನುಮತಿಗಾಗಿ ರೈಲ್ವೆ ಅಧಿಕಾರಿಗಳು ಕಾಯುತ್ತಿದ್ದು, ಫೆಬ್ರವರಿಯಲ್ಲಿ ಅನುಮತಿ ಸಿಗುವ ಸಾಧ್ಯತೆ ಇದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು