ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನಗಳನ್ನು ಜನರ ಹೃದಯ ತಲುಪಿಸಿದ ಹಳಕಟ್ಟಿ’

Last Updated 3 ಜುಲೈ 2020, 3:35 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆ ಮನೆ ತಿರುಗಿ ಜಗುಲಿಯಲ್ಲಿದ್ದ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ, ಸಂಪಾದಿಸಿ, ಸಂರಕ್ಷಿಸಿ ಅವುಗಳನ್ನು ಜನರ ಕೈಗೆ ಕೊಟ್ಟವರು ಡಾ. ಫ.ಗು. ಹಳಕಟ್ಟಿ. ಅವರ ಅಂದಿನ ಪರಿಶ್ರಮ ಇಂದು ಎಲ್ಲ ಶಿವಶರಣರ ವಚನಗಳು ದೇಶದ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿವೆ’ ಎಂದುವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮಠದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಫ.ಗು. ಹಳಕಟ್ಟಿಯವರ 141ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಷ್ಟ್ರಕವಿ ಕುವೆಂಪು ಅವರಿಂದ ‘ಕನ್ನಡ ಸಾಹಿತ್ಯ ಗುಮ್ಮಟ’ ಎಂಬ ಪ್ರಶಂಸೆಗೆ ಪಾತ್ರರಾಗಿದ್ದ ಹಳಕಟ್ಟಿಯವರಿಗೆ ಇಡೀ ಕನ್ನಡ ನಾಡು ಚಿರಋಣಿಯಾಗಿರಬೇಕು’ ಎಂದರು.

‘ಹನ್ನೆರಡನೆಯ ಶತಮಾನದಲ್ಲಿ ರಚಿತವಾಗಿ ಸುಪ್ತವಾಗಿದ್ದ ಬಸವಾದಿ ಶಿವಶರಣರ ವಚನಸಾಹಿತ್ಯ ಭಂಡಾರವನ್ನು ಸಂಪಾದಿಸಿ ಪ್ರಕಟಗೊಳಿಸುವುದರ ಮೂಲಕ ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಶ್ರೀಮಂತಗೊಳಿಸಿದರು’ ಎಂದರು.

ಮಠದ ಕಾರ್ಯದರ್ಶಿ ಸಿ. ಬಸವರಾಜ, ಮಠದ ಉಚಿತ ವಸತಿ ಶಾಲೆಯ ಮುಖ್ಯಶಿಕ್ಷಕಿ ಶ್ರೀದೇವಿ ಹಿರೇಮಠ, ವ್ಯವಸ್ಥಾಪಕ ಶರಣು ಕನ್ನೊಳ್ಳಿ, ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕ ರೇವಣಸಿದ್ಧೇಶ್ವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT