ಶನಿವಾರ, ಜನವರಿ 25, 2020
29 °C

ನಕಲಿ ಐಪಿಎಸ್‌ ಅಧಿಕಾರಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಐಪಿಎಸ್ ಅಧಿಕಾರಿ’ ಎಂದು ಹೇಳಿಕೊಂಡು ಉದ್ಯಮಿಯಿಂದ ಹಣ ಕಿತ್ತುಕೊಳ್ಳಲು ಯತ್ನಿಸಿದ ಆರೋಪದಲ್ಲಿ ಭರತ್‌ಕುಮಾರ್ (48) ಎಂಬಾತನನ್ನು ಸಿದ್ಧಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಲಾಲ್‌ಬಾಗ್‌ನಲ್ಲಿ ಡಿ.14ರಂದು ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದ ಉದ್ಯಮಿ ಭೀಮ್ ಚಂದ್ ಎಂಬುವವರನ್ನು ಅಡ್ಡಗಟ್ಟಿದ್ದ ಆರೋಪಿ ಭರತ್‌, ತಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ‘₹ 1 ಲಕ್ಷ ನೀಡದಿದ್ದರೆ ಸುಳ್ಳು ಕೇಸ್‌ನಲ್ಲಿ ನಿನ್ನ ಮಗ ಹಾಗೂ ನಿನಗೆ ಪಾಠ ಕಲಿಸುತ್ತೇನೆ’ ಎಂದು ಬೆದರಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು