ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹40 ಸಾವಿರಕ್ಕೆ 3 ಗಂಟೆಯಲ್ಲಿ ₹4.50 ಲಕ್ಷ ಲಾಭ: ಬಿದರಿ ಹೆಸರಲ್ಲಿ ಸುಳ್ಳು ಪೋಸ್ಟ್

Published 8 ಮೇ 2024, 4:41 IST
Last Updated 8 ಮೇ 2024, 4:41 IST
ಅಕ್ಷರ ಗಾತ್ರ

ಬೆಂಗಳೂರು: '₹40,000 ಹೂಡಿಕೆ ಮಾಡಿದ್ದಕ್ಕೆ ಮೂರೇ ಗಂಟೆಯಲ್ಲಿ ₹4.50 ಲಕ್ಷ ಲಾಭ ಬಂದಿದೆ' ಎಂಬುದಾಗಿ ಉಲ್ಲೇಖಿಸಿ‌ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಶಂಕರ ಬಿದರಿ‌ ಹೆಸರಿನಲ್ಲಿ ಸುಳ್ಳು ಪೋಸ್ಟ್ ಪ್ರಕಟಿಸಲಾಗಿದ್ದು, ಇದೊಂದು ವಂಚನೆ ಜಾಲವೆಂದು ಶಂಕಿಸಲಾಗಿದೆ.

ಶಂಕರ ಬಿದರಿ ಅವರ ಫೇಸ್‌ಬುಕ್ ಖಾತೆಯಲ್ಲಿ ಬುಧವಾರ ಬೆಳಿಗ್ಗೆ ಸುಳ್ಳು ಸಂದೇಶ ಪ್ರಕಟಿಸಲಾಗಿದೆ. ಹೂಡಿಕೆ ಮಾಹಿತಿಗೆ ವಿದೇಶಿ ಮಹಿಳೆಯೊಬ್ಬರನ್ನು‌ ಸಂಪರ್ಕಿಸುವಂತೆ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಲಿಂಕ್ ಸಹ ನಮೂದಿಸಲಾಗಿದೆ.

'ವಿಕ್ಟೋರಿಯಾ36ಟ್ರೇಡರ್ ಎಂಬುವವರು ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದರು. ಇವರು ಬಿಟ್ ಕಾಯಿನ್ ಮೈನಿಂಗ್ ಪರಿಣಿತರು ಎಂಬುದು ಗೊತ್ತಾಯಿತು. ಹೀಗಾಗಿ, ಅವರ ಸಲಹೆಯಂತೆ ₹40,000 ಹೂಡಿಕೆ ಮಾಡಿದ್ದೆ. ಕೇವಲ‌ ಮೂರೇ ಗಂಟೆಯಲ್ಲಿ ನನಗೆ ₹4.50 ಲಕ್ಷ ಲಾಭದ ಹಣ ವಾಪಸು ಬಂದಿದೆ. ಅದನ್ನು ನನ್ನ ಖಾತೆಯಿಂದ ಡ್ರಾ‌ ಮಾಡಿಕೊಂಡಿದ್ದೇನೆ' ಎಂಬುದಾಗಿಯೂ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಜೊತೆಗೆ ಕೆಲ ಸ್ಕ್ರೀನ್‌ಶಾಟ್‌ಗಳನ್ನು ಲಗತ್ತಿಸಲಾಗಿದೆ.

ಸುಳ್ಳು‌ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಶಂಕರ ಬಿದರಿ, 'ಯಾರೋ ಅಪರಿಚಿತರು ನನ್ನ ಖಾತೆ ಹ್ಯಾಕ್ ಮಾಡಿ, ಸುಳ್ಳು ಪೋಸ್ಟ್ ಪ್ರಕಟಿಸಿದ್ದಾರೆ. ಇದನ್ನು ಯಾರೂ‌ ನಂಬಬಾರದು. ಎಚ್ಚರಿಕೆ ವಹಿಸಬೇಕು. ಸುಳ್ಳು ಪೋಸ್ಟ್ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT