ಕೇಂದ್ರವು ನಗರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಮೀಕ್ಷೆಯ ವಿವರ ನೀಡಿದ ಅವರು, ‘ದಕ್ಷಿಣ ಕರ್ನಾಟಕದ 15 ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. 660 ಗ್ರಾಮಗಳು ಹಾಗೂ ನಗರ ಪ್ರದೇಶಗಳಿಗೆ ಭೇಟಿ ನೀಡಿ, ಮಾಹಿತಿ ಕಲೆಹಾಕಲಾಗಿದೆ. ಈ ಬಾರಿ ಹೊಸ ಪ್ರಶ್ನೆಗಳನ್ನು ಸೇರ್ಪಡೆ ಮಾಡಿದ್ದು ವಿಶೇಷ. ಕೋವಿಡ್ ಸಂದರ್ಭದಲ್ಲಿ ಎದುರಿಸಿದ ಸಮಸ್ಯೆ, ಕೊರೊನಾ ಸೋಂಕಿನ ಪರಿಣಾಮ ಸೇರಿ ಹಲವು ಹೊಸ ಪ್ರಶ್ನೆಗಳನ್ನು ಜನರಿಗೆ ಕೇಳಲಾಗಿತ್ತು. ಮಹಿಳೆಯರಿಗೆ ಸಂಬಂಧಿಸಿದಂತೆಯೂ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷೆ ಒಳಗೊಂಡಂತೆ ವಿವಿಧ ಪ್ರಶ್ನೆಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿತ್ತು’ ಎಂದು ವಿವರಿಸಿದರು.