ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ–ತಾಯಿಯ ಪುತ್ಥಳಿ ಸ್ಥಾಪನೆ

Last Updated 19 ಜೂನ್ 2022, 18:24 IST
ಅಕ್ಷರ ಗಾತ್ರ

ಮಾಗಡಿ: ಕಲ್ಯಾಗೊಲ್ಲರ ಹಟ್ಟಿ ತೋಟದ ಮನೆಯಲ್ಲಿ ಶಿಕ್ಷಕರೊಬ್ಬರು ಹೆತ್ತವರ ಪ್ರತಿಮೆ ನಿರ್ಮಿಸಿದ್ದಾರೆ.

ಶಿಕ್ಷಕ ಮಂಜುನಾಥ್ಮತ್ತು ಅವರ ಸಹೋದರ ಕೆ.ಎಸ್‌.ಶಿವಣ್ಣ ಸೇರಿ ತಂದೆ–ತಾಯಿಗಳ ಪುತ್ಥಳಿ ಸ್ಥಾಪಿಸಿ, ಶಿಲಾ ಮಂಟಪ ಕಟ್ಟಿಸಿ ಗಮನ ಸೆಳೆದಿದ್ದಾರೆ.

ಕಳ್ಳಿಪಾಳ್ಯ ಭಕ್ತಮುನೇಶ್ವರ ಕ್ಷೇತ್ರದ ಪೀಠಾಧ್ಯಕ್ಷ ರಂಗನಾಥಾನಂದ ಸ್ವಾಜೀಜಿ ಮಾತಾಪಿತರ ಶಿಲಾಮಂದಿರ ಉದ್ಘಾಟಿಸಿದರು.

ಇದೇ ಕಾಶಿ, ಕೈಲಾಸದಂತೆ: ಶಿಕ್ಷಕ ಮಂಜುನಾಥ್‌ ಮಾತನಾಡಿ, ‘ನಮ್ಮ ತಂದೆ ಸಿದ್ದಪ್ಪ, ತಾಯಿ ಲಿಂಗಮ್ಮ ಕೃಷಿ ಕೂಲಿಕಾರ್ಮಿಕರಾಗಿದ್ದರು. ಕೂಲಿನಾಲಿ ಮಾಡಿ ನಮ್ಮ ಅಣ್ಣ ಶಿವಣ್ಣ ಮತ್ತು ನನ್ನನ್ನು ವಿದ್ಯಾವಂತರನ್ನಾಗಿಸಿದರು. ಶಿಕ್ಷಕನಾದ ನಾನು ಕೇವಲ ತರಗತಿಯಲ್ಲಿ ಮಕ್ಕಳ ಎದುರಿನಲ್ಲಿ ತಾಯಿತಂದೆ ದೇವರೆಂದು ಪಾಠಬೋದಿಸಿ, ಮನೆ ಯಲ್ಲಿ ಮರೆಯುವುದು ಸರಿಯಲ್ಲ ಎಂದು ಅಣ್ಣತಮ್ಮ ಸೇರಿ ಮಾತಾಪಿತರ ಮಂದಿರ ನಿರ್ಮಿಸಿದ್ದೇವೆ. ನಮಗೆ ಇದೆ ಕಾಶಿ, ಕೈಲಾಸದಂತಿದೆ’ ಎಂದರು.

ಶಿಕ್ಷಕಿ ಸುಷ್ಮಾ ಮಂಜುನಾಥ್‌, ಮಗಳು ಸುಭಾಶ್ರೀ, ಮಗ ಯಶಸ್‌, ಸಿಆರ್‌ಪಿ ಮುನಿಯಪ್ಪ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಮಂಜುನಾಥ್‌ ಅವರ ಬಂಧುಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT