ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳಿಗೆ ಬ್ರ್ಯಾಂಡ್ ಸಲ್ಲ: ನ್ಯಾ. ಪ್ರಭಾಕರ ಶಾಸ್ತ್ರಿ

Published 3 ಏಪ್ರಿಲ್ 2024, 18:50 IST
Last Updated 3 ಏಪ್ರಿಲ್ 2024, 18:50 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವುದೇ ನ್ಯಾಯಮೂರ್ತಿಯನ್ನು ಪರಿಹಾರ ಒದಗಿಸುವ ಅಥವಾ ಉದಾರವಾದಿ ನ್ಯಾಯಮೂರ್ತಿ ಎಂದು ಬಿಂಬಿಸುವುದಕ್ಕೆ ನನ್ನ ಸಹಮತ ಇಲ್ಲ’ ಎಂದು ನ್ಯಾಯಮೂರ್ತಿ ಪ್ರಭಾಕರ್ ಶಾಸ್ತ್ರಿ ಹೇಳಿದರು.

ಕೋರ್ಟ್ ಹಾಲ್ 1ರಲ್ಲಿ ಬುಧವಾರ ತಮಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನ್ಯಾಯಮೂರ್ತಿಗಳನ್ನು ಪರಿಹಾರ ನೀಡುವ ನ್ಯಾಯಮೂರ್ತಿ ಅಥವಾ ಪ್ರಗತಿಪರ ನ್ಯಾಯಮೂರ್ತಿ ಎಂದು ಬ್ರ್ಯಾಂಡ್ ಮಾಡಿ ಗುರುತಿಸುವುದನ್ನು ನಾನು ನೋಡಿದ್ದೇನೆ. ನನ್ನ ಪ್ರಕಾರ ನ್ಯಾಯಮೂರ್ತಿಯು ಎಲ್ಲಾ ವಿಧದಲ್ಲೂ ನ್ಯಾಯಮೂರ್ತಿಯಾಗಿರಬೇಕು. ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಅವರ ಮುಂದಿರುವ ಪ್ರಕರಣಗಳಲ್ಲಿ ಕಠಿಣವಾಗಿ ನಡೆದುಕೊಳ್ಳಬೇಕು ಎಂದು ಬಯಸಿದರೆ ಹಾಗೆಯೇ ನಡೆದುಕೊಳ್ಳಬೇಕಾಗುತ್ತದೆ. ಅಗತ್ಯ ಇರುವ ಪ್ರಕರಣಗಳಲ್ಲಿ ನ್ಯಾಯಮೂರ್ತಿಯು ಸಹಾನುಭೂತಿಯಿಂದ ಮತ್ತು ಹೂವಿನಂತೆ ಇರಬೇಕಾಗುತ್ತದೆ’ ಎಂದರು.

‘ಪ್ರಕರಣದ ಅರ್ಹತೆಯಿಂದ ವಿಮುಖರಾಗಬಾರದು. ತಮಗೆ ದೊರೆತಿರುವ ವಿಶೇಷ ಅಧಿಕಾರವನ್ನು ದುರ್ಬಳಕೆ ಮಾಡಬಾರದು. ಎಲ್ಲಾ ಪ್ರಕರಣಗಳಲ್ಲೂ ಪ್ರಗತಿಪರ ಮನೋಭಾವದಿಂದ ನೋಡುವುದು ಅಥವಾ ಅನಗತ್ಯವಾದ ಪ್ರಕರಣದಲ್ಲಿ ವಿಶೇಷ ಅಧಿಕಾರ ಬಳಕೆ ಮಾಡುವುದು ಒಳ್ಳೆಯ ನ್ಯಾಯಮೂರ್ತಿಯ ಲಕ್ಷಣವಲ್ಲ‘ ಎಂದರು.

‘ಈ ರೀತಿ ಮಾಡುವುದರಿಂದ ಅವರು ಜನಪ್ರಿಯ ನ್ಯಾಯಮೂರ್ತಿಯಾಗಬಹುದೇ ಹೊರತು ಉತ್ತಮ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಎನಿಸಿಕೊಳ್ಳಲಾರರು. ಆದ್ದರಿಂದ, ನಿಜದೃಷ್ಟಿಯಲ್ಲಿ ಉದಾರವಾದಿ ಅಥವಾ ಸಂಪ್ರದಾಯವಾದಿಯಾಗುವುದು ನ್ಯಾಯಮೂರ್ತಿಯ ದೋಷವಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT