ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್ಟ್ಯಾಗ್ ಬಳಕೆದಾರನ ಖಾತೆಯಿಂದ ₹50 ಸಾವಿರ ಕನ್ನ

ಆ್ಯಕ್ಸಿಸ್ ಬ್ಯಾಂಕ್ ಪ್ರತಿನಿಧಿ ಸೋಗಿನಲ್ಲಿ ವಂಚನೆ
Last Updated 18 ಜನವರಿ 2020, 21:43 IST
ಅಕ್ಷರ ಗಾತ್ರ

ಬೆಂಗಳೂರು: ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ಭಾರತೀಯ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರಯತ್ನಿಸುತ್ತಿದ್ದು, ಇತ್ತ ಫಾಸ್ಟ್ಯಾಗ್ ಬಳಕೆದಾರ ಬ್ಯಾಂಕ್ ಖಾತೆಗಳಿಗೆ ಸೈಬರ್‌ ವಂಚಕರು ಕನ್ನ ಹಾಕಲು ಆರಂಭಿಸಿದ್ದಾರೆ.

ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಫಾಸ್ಟ್ಯಾಗ್ ಬಳಕೆದಾರರೊಬ್ಬರನ್ನು ಆ್ಯಕ್ಸಿಸ್ ಬ್ಯಾಂಕ್ ಪ್ರತಿನಿಧಿ ಸೋಗಿನಲ್ಲಿ ಸಂಪರ್ಕಿಸಿದ್ದ ವಂಚಕರು, ₹ 50 ಸಾವಿರ ಡ್ರಾ ಮಾಡಿಕೊಂಡು ವಂಚಿಸಿದ್ದಾರೆ. ಫಾಸ್ಟ್ಯಾಗ್ ಸಂಬಂಧಿಸಿದ ಮೊದಲ ವಂಚನೆ ಪ್ರಕರಣ ಇದಾಗಿದ್ದು, ಹೆಣ್ಣೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಎಂಟು ನಿಮಿಷದಲ್ಲೇ ಹಣ ಕಡಿತ: ‘ಸೈಬರ್ ತಜ್ಞರೇ ಆಗಿರುವ ದೂರುದಾರ, ಫಾಸ್ಟ್ಯಾಗ್ ರಿಚಾರ್ಜ್‌ ಸಂಬಂಧದ ಸಮಸ್ಯೆ ಬಗ್ಗೆ ಟ್ವಿಟರ್‌ನಲ್ಲಿ ಜ. 11ರಂದು ಆ್ಯಕ್ಸಿಸ್ ಬ್ಯಾಂಕ್‌ಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು, ಸಮಸ್ಯೆ ಇತ್ಯರ್ಥ ಮಾಡುವುದಾಗಿ ಹೇಳಿ ‘ಆ್ಯಕ್ಸಿಸ್ ಬ್ಯಾಂಕ್ಫಾಸ್ಟ್ಯಾಗ್ ಫಾರ್ಮ್’ ಕಳುಹಿಸಿದ್ದರು. ಅದನ್ನು ನಂಬಿದ್ದ ದೂರುದಾರ, ಫಾಸ್ಟ್ಯಾಗ್ ಸ್ಟಿಕರ್ ಹಾಗೂ ವಾಲೆಟ್ ಮಾಹಿತಿ ನಮೂದಿಸಿದ್ದರು. ಮೊಬೈಲ್ ಹಾಗೂ ಯುಪಿಐ ಮಾಹಿತಿ ಸಹ ಕೊಟ್ಟಿದ್ದರು. ನಂಬರ್ ಕೊಟ್ಟಿದ್ದೆ. ಅದಾಗಿ ಎಂಟು ನಿಮಿಷದಲ್ಲೇ ಆರೋಪಿ, ದೂರುದಾರರ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ₹ 50 ಸಾವಿರ ಡ್ರಾ ಮಾಡಿಕೊಂಡಿದ್ದಾನೆ’ ಎಂದು ತಿಳಿಸಿದರು.

‘ವಂಚಕರ ಪತ್ತೆಗಾಗಿ ಖುದ್ದು ತನಿಖೆ ನಡೆಸಿದ್ದ ದೂರುದಾರ,ಪಶ್ಚಿಮ ಬಂಗಾಳದಿಂದ ಕರೆ ಮಾಡಿದ್ದ ವ್ಯಕ್ತಿಯೇ ಕೃತ್ಯ ಎಸಗಿರುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳ ಸಮೇತವೇ ದೂರು ನೀಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT