ಬೆಂಗಳೂರು: ಆದಿವಾಸಿಗಳ ಕಲ್ಯಾಣಕ್ಕಾಗಿ ಹೋರಾಡಿ ಮಡಿದ ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಸಂತ ಪದವಿ ನೀಡಬೇಕು ಎಂದು ಪೋಪ್ ಫ್ರಾನ್ಸಿಸ್ ಅವರಿಗೆ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ ಮನವಿ ಮಾಡಿದೆ.
ನಗರದಲ್ಲಿ ಗುರುವಾರ ಆನ್‌ಲೈನ್‌ನಲ್ಲಿ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಅವರು ಈ ವಿಷಯ ಮಂಡಿಸಿದರು. ಭಾರತದಲ್ಲಿರುವ ರೋಮ್‌ನ ರಾಯಭಾರಿ ಹಾಗೂ ಭಾರತದ ಧರ್ಮಾಧ್ಯಕ್ಷರ ಕೂಟಕ್ಕೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು.
ಲೇಖಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಅದಿವಾಸಿಗಳ ಕಲ್ಯಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟವರು ಸ್ಟ್ಯಾನ್ ಸ್ವಾಮಿಯವರು. ಕಠಿಣವಾದ ಯುಎಪಿಎ ಜಾರಿ ಮಾಡುವ ಮೂಲಕ ಪ್ರಭುತ್ವವು ಅವರ ಸಾವಿಗೆ ಕಾರಣವಾಗಿದೆ. ಈ ಕಾಯ್ದೆ ರದ್ದತಿಗೆ ಎಲ್ಲರೂ ಹೋರಾಡಬೇಕು’ ಎಂದರು.
ಫಾದರ್ ಸೈಮನ್ ಬರ್ತಲೊಮಿಯೊ ಅಧ್ಯಕ್ಷತೆ ವಹಿಸಿದ್ದರು. ಸಿ. ಮರಿಜೋಸೆಫ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎ. ದೇವಕುಮಾರ್, ಶಿವಸುಂದರ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.