ಬೆಂಗಳೂರು: ಆಹಾರ ಪೂರೈಕೆ ಮಾಡಲು ಗ್ರಾಹಕರೊಬ್ಬರ ಮನೆಗೆ ಹೋಗಿದ್ದ ಡೆಲಿವರಿ ಬಾಯ್ ತೇಜು ಎಂಬಾತ ನಾಯಿಯನ್ನು ಕೊಂದಿದ್ದು, ಈ ಸಂಬಂಧ ಬಂಡೇಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನ. 27ರಂದು ರಾತ್ರಿ ಈ ಘಟನೆ ನಡೆದಿದೆ. ಜೀವನ್ಜ್ಯೋತಿ ಫೌಂಡೇಶನ್ನ ಕೆ.ಬಿ. ಹರೀಶ್ ಎಂಬುವರು ನೀಡಿರುವ ದೂರು ಆಧರಿಸಿ ತೇಜು ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆತನ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಎಚ್ಎಸ್ಆರ್ ಲೇಔಟ್ 2ನೇ ಹಂತದ ಕೋಲಿವ್ ಹಡ್ಸನ್ ಕಟ್ಟಡ ಬಳಿಯ ನಿವಾಸಿಯೊಬ್ಬರು ಉಬರ್ ಈಟ್ಸ್ ಆ್ಯಪ್ನಲ್ಲಿ ಆಹಾರ ಕಾಯ್ದಿರಿಸಿದ್ದರು. ಆಹಾರ ಪೂರೈಕೆ ಮಾಡಲು ತೇಜು ಸ್ಥಳಕ್ಕೆ ಬಂದಿದ್ದ. ಅದೇ ವೇಳೆ ನಾಯಿ ಆತನ ಬಳಿ ಹೋಗಿತ್ತು. ಸ್ಥಳದಲ್ಲೇ ಇದ್ದ ಮರದ ಕಟ್ಟಿಗೆಯಿಂದ ನಾಯಿಗೆ ಹೊಡೆದು ಕೊಂದಿದ್ದ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.