ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಕಿಟ್‌ಗಳ ಶೇಖರಣೆ: ಮೇಯರ್‌

Last Updated 10 ಏಪ್ರಿಲ್ 2020, 4:11 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿ ವಾರ್ಡ್‌ನಲ್ಲೂ ಆಹಾರ ಧಾನ್ಯಗಳ 5 ಸಾವಿರ ಕಿಟ್ ಮತ್ತು ಔಷಧ ಶೇಖರಿಸಿಟ್ಟುಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಮೇಯರ್ ಎಂ.ಗೌತಮ್‌ಕುಮಾರ್ ತಿಳಿಸಿದರು.

ಕೋವಿಡ್-19 ಸಂಬಂಧ ಪಾಲಿಕೆಯ ಸರ್ವ ಪಕ್ಷಗಳ ನಾಯಕರು,ಸ್ಥಾಯಿ ಸಮಿತಿ ಅಧ್ಯಕ್ಷರು, ಈ ಹಿಂದಿನ ಮೇಯರ್‌ಗಳು ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ ಅವರು,‘ಸದಸ್ಯರುಗಳ ₹2 ಕೋಟಿ ಅನುದಾನದಲ್ಲಿ ಪ್ರತ್ಯೇಕವಾಗಿ ₹25 ಲಕ್ಷ ಅನುದಾನ ಮೀಸಲಿಡಲು ಎರಡು ಮೂರು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಕೂಲಿ ಕಾರ್ಮಿಕರು, ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಆಟೋ ಚಾಲಕರು ಸೇರಿ ಬಡ ಜನರನ್ನು ಗುರುತಿಸಿ ಕಿಟ್ ವಿತರಿಸ
ಲಾಗುವುದು. ಸದ್ಯ ಕಾರ್ಮಿಕ ಇಲಾಖೆ ವತಿಯಿಂದ ವಲಸೆ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಲಾಗುತ್ತಿದೆ. 72,326 ವಲಸೆ ಕಾರ್ಮಿಕರನ್ನು ಗುರುತಿಸಿ 41,527 ಕಿಟ್‌ ನೀಡಲಾಗಿದೆ’ ಎಂದು ತಿಳಿಸಿದರು.

ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಮಾತನಾಡಿ, ‘ಪ್ರಾಥಮಿಕ ಸೋಂಕಿತರನ್ನುಕ್ವಾರಂಟೈನ್‌ನಲ್ಲಿ ಇಡಲು 17 ಹೋಟೆಲ್‌ಗಳನ್ನು ಗುರುತಿಸಿ 1,400 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಸದ್ಯ ಎರಡು ಹೋಟೆಲ್‌ಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆ.
ವಲಸೆ ಕಾರ್ಮಿಕರಿಗೆ ವಸತಿ ಕಲ್ಪಿಸಲು 214 ಕಲ್ಯಾಣ ಮಂಟಪ ಗುರುತಿಸಿದ್ದು, ಸದ್ಯ 3 ಕಲ್ಯಾಣ ಮಂಟಪಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT