ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಸಮಿತಿ ರಚನೆ

Published 11 ಜುಲೈ 2024, 0:04 IST
Last Updated 11 ಜುಲೈ 2024, 0:04 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಬಿಬಿಎಂಪಿ ಚುನಾವಣೆಗೆ ಅಗತ್ಯವಾದ ಪೂರ್ವಸಿದ್ಧತೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ‘ಬಿಬಿಎಂಪಿ ಚುನಾವಣೆ ಪ್ರಾಥಮಿಕ ವರದಿ ಸಮಿತಿ’ಯನ್ನು ಕಾಂಗ್ರೆಸ್‌ ರಚಿಸಿದೆ.

‘ಸಮಿತಿಯು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸಚಿವರು, ಶಾಸಕರು, ಮಾಜಿ ಶಾಸಕರು, ಡಿಸಿಸಿ ಅಧ್ಯಕ್ಷರು, 2023ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಇತರ ನಾಯkರ ಜೊತೆ ಚರ್ಚಿಸಿ ಒಂದು ತಿಂಗಳ ಒಳಗೆ ವರದಿ ಸಲ್ಲಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಸಮಿತಿಯಲ್ಲಿ ಇರುವವರು: ಬೆಂಗಳೂರು ಪೂರ್ವ ಡಿಸಿಸಿ ಸಮಿತಿ– ಮಾಜಿ ಮೇಯರ್ ಜೆ. ಹುಚ್ಚಪ್ಪ, ಮಾಜಿ ಉಪ ಮೇಯರ್‌ಗಳಾದ ಲಕ್ಷ್ಮೀನಾರಾಯಣ, ಮಂಜುಳಾ ನಾಯ್ಡು, ಆಡಳಿತ ಪಕ್ಷದ ಮಾಜಿ ನಾಯಕ ಎಚ್. ಜಯರಾಮ್. ಬೆಂಗಳೂರು ಪಶ್ಚಿಮ ಡಿಸಿಸಿ– ಮಾಜಿ ಮೇಯರ್‌ಗಳಾದ ಸಂಪತ್ ರಾಜ್, ಮಮತಾಜ್ ಬೇಗಂ, ಮಾಜಿ ಆಡಳಿತ ಪಕ್ಷದ ಮಾಜಿ ನಾಯಕರಾದ ಆರ್.ಎಸ್. ಸತ್ಯನಾರಾಯಣ, ಎಂ. ಶಿವರಾಜ್. ಬೆಂಗಳೂರು ಉತ್ತರ ಡಿಸಿಸಿ– ಮಾಜಿ ಮೇಯರ್‌ಗಳಾದ ಪಿ.ಆರ್. ರಮೇಶ್, ಶಾಂತಕುಮಾರಿ, ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್, ‌ಮಾಜಿ ಆಡಳಿತ ಪಕ್ಷದ ನಾಯಕ ಎಂ. ಉದಯಶಂಕರ್. 

ಬೆಂಗಳೂರು ದಕ್ಷಿಣ ಡಿಸಿಸಿ– ಮಾಜಿ ಮೇಯರ್‌ಗಳಾದ ಎಂ. ರಾಮಚಂದ್ರಪ್ಪ, ಜಿ. ಪದ್ಮಾವತಿ,‌ ಆಡಳಿತ ಪಕ್ಷದ ಮಾಜಿ ನಾಯಕರಾದ ಬಿ.ಟಿ. ಶ್ರೀನಿವಾಸ್, ಅಬ್ದುಲ್ ವಾಜಿದ್, ಮಾಜಿ ಉಪ ಮೇಯರ್ ಇಂದಿರಾ. ಬೆಂಗಳೂರು ಸೆಂಟ್ರಲ್ ಡಿಸಿಸಿ – ಮಾಜಿ ಮೇಯರ್‌ಗಳಾದ ಮಂಜುನಾಥ ರೆಡ್ಡಿ, ವೆಂಕಟೇಶ್ ಮೂರ್ತಿ, ಆಡಳಿತ ಪಕ್ಷದ ಮಾಜಿ ನಾಯಕರಾದ ರಿಜ್ವಾನ್ ನವಾಬ್, ನಾಗರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT