ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಸೋಗಿನಲ್ಲಿ ಉದ್ಯಮಿಗೆ ಬೆದರಿಕೆ: ನಾಲ್ವರ ಬಂಧನ

Published : 16 ಜುಲೈ 2025, 0:10 IST
Last Updated : 16 ಜುಲೈ 2025, 0:10 IST
ಫಾಲೋ ಮಾಡಿ
Comments
‘ಪ್ರತೀಕಾರಕ್ಕಾಗಿ ಕೃತ್ಯ’
‘ದೂರುದಾರ ಉದ್ಯಮಿ ಇತರೆ ಮೂವರೊಂದಿಗೆ ಸೇರಿಕೊಂಡು ಕಾರು ಬಿಡಿಭಾಗಗಳ ಮಾರಾಟ ಹಾಗೂ ರಿಯಲ್‌ ಎಸ್ಟೇಟ್‌ನಲ್ಲಿ ಮೋಸ ಮಾಡಿದ್ದರು. ಉದ್ಯಮಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದೆ. ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುವ ಉದ್ದೇಶದಿಂದ ಉತ್ತರ ಪ್ರದೇಶದಿಂದ ಮೂವರನ್ನು ಕರೆಸಿಕೊಂಡು ಕೃತ್ಯ ಎಸಗಿರುವುದಾಗಿ ರಫೀಕ್‌ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಗಳು ಕೃತ್ಯ ಎಸಗಲು ಪಿಸ್ತೂಲ್ ಮತ್ತು ಗುಂಡುಗಳೊಂದಿಗೆ ನಗರಕ್ಕೆ ಬಂದು ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಪಿಸ್ತೂಲ್‌ ಹಾಗೂ ಗುಂಡುಗಳನ್ನು ಆರೋಪಿಗಳು ಬಚ್ಚಿಟ್ಟಿದ್ದು ಶೋಧ ಕಾರ್ಯ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.
ಬಿಷ್ಣೋಯಿ ಗ್ಯಾಂಗ್‌ಗೂ ಆರೋಪಿತರಿಗೂ ಸಂಬಂಧ ಇಲ್ಲ
ಪ್ರಕರಣವೊಂದರಲ್ಲಿ ದೆಹಲಿ ಪೊಲೀಸರಿಂದ ಬಂಧನವಾಗಿದ್ದ ಮಾವಳ್ಳಿಯ ನಿವಾಸಿ ಮೊಹಮ್ಮದ್ ರಫೀಕ್ ಕೆಲವು ತಿಂಗಳು ತಿಹಾರ್ ಜೈಲಿನಲ್ಲಿದ್ದ. ಆ ಸಂದರ್ಭದಲ್ಲಿ ಉತ್ತರ ಪ್ರದೇಶದ ಮೂವರು ಆರೋಪಿಗಳು ಪರಿಚಯ ಆಗಿದ್ದರು. ಜೈಲಿನಲ್ಲಿದ್ದಾಗ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಬಗ್ಗೆ ರಫೀಕ್‌ ತಿಳಿದುಕೊಂಡಿದ್ದ. ಆತನ ಹೆಸರು ಹೇಳಿಕೊಂಡು ಬೆದರಿಸಲು ಸಂಚು ರೂಪಿಸಿದ್ದ. ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ಗೂ ಬಂಧಿತ ಆರೋಪಿಗಳಿಗೂ ಯಾವುದೇ ಸಂಬಂಧ ಇಲ್ಲ. ಲಾರೆನ್ಸ್ ಬಿಷ್ಣೋಯಿ ಹೆಸರು ಬಳಸಿಕೊಂಡು ಸುಲಿಗೆ ಮಾಡಲು ಪ್ರಯತ್ನಿಸಿದ್ದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT