ಶನಿವಾರ, ಫೆಬ್ರವರಿ 27, 2021
30 °C

ಸ್ಟ್ಯಾನ್ ಸ್ವಾಮಿಗೆ ಮುಕುಂದನ್‌ ಮೆನನ್‌ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾನವ ಹಕ್ಕುಗಳ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿಯವರಿಗೆ ಮುಕುಂದನ್‌ ಸಿ. ಮೆನನ್‌ ಪ್ರಶಸ್ತಿಯನ್ನು ಭಾನುವಾರ ನೀಡಲಾಯಿತು. ಬಂಧನದಲ್ಲಿರುವ ಸ್ಟ್ಯಾನ್‌ ಸ್ವಾಮಿಯವರ ಪರವಾಗಿ ನಗರದ ಭಾರತೀಯ ಸಾಮಾಜಿಕ ಸಂಸ್ಥೆಯ ನಿರ್ದೇಶಕ ಫಾದರ್‌ ಎಸ್.ಜೆ. ಜೋಸೆಫ್‌ ಪ್ರಶಸ್ತಿ ಸ್ವೀಕರಿಸಿದರು.

ದಿ ನ್ಯಾಷನಲ್‌ ಕನ್ಫೆಡರೇಷನ್‌ ಆಫ್‌ ಹ್ಯೂಮನ್‌ ರೈಟ್ಸ್‌ ಆರ್ಗನೈಸೇಷನ್‌ (ಎನ್‌ಸಿಎಚ್ಆರ್‌ಒ) ಮಾನವ ಹಕ್ಕುಗಳು, ಕಲೆ, ಮಾಧ್ಯ, ಸಾಹಿತ್ಯ, ಪರಿಸರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಮುಕುಂದನ್‌ ಮೆನನ್‌ ಪ್ರಶಸ್ತಿಯನ್ನು ನೀಡುತ್ತದೆ.

82 ವರ್ಷದ ಸ್ಟ್ಯಾನ್‌ ಸ್ವಾಮಿ ಈಗ ನವಿಮುಂಬೈನ ತಲೋಜ ಜೈಲಿನಲ್ಲಿದ್ದಾರೆ. 2018ರ ಪುಣೆಯ ಭೀಮಾ– ಕೋರೆಗಾಂವ್‌ ಗ್ರಾಮದಲ್ಲಿ ಜನವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸ್ವಾಮಿ ಅವರನ್ನು ಅಕ್ಟೋಬರ್‌ನಲ್ಲಿ ರಾಂಚಿಯ ಅವರ ಮನೆಯಲ್ಲಿ ಬಂಧಿಸಲಾಗಿತ್ತು.

ಪ್ರಶಸ್ತಿಯು ₹25 ಸಾವಿರ ನಗದು ಮತ್ತು ಪ್ರಶಂಸನಾ ಪತ್ರವನ್ನು ಒಳಗೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು