ಡಾಲರ್ ಆಸೆ ತೋರಿಸಿ ವಂಚನೆ
ಬೆಂಗಳೂರು: ಡಾಲರ್ ಆಸೆ ತೋರಿಸಿದ್ದ ಅಪರಿಚಿತನೊಬ್ಬ, ನಗರದ ನಿವಾಸಿ ಜಿ. ಛಾಯಾಕುಮಾರ್ ಎಂಬುವರಿಂದ ₹ 2 ಲಕ್ಷ ಪಡೆದು ವಂಚಿಸಿದ್ದಾನೆ.
ಆ ಸಂಬಂಧ ಛಾಯಾಕುಮಾರ್, ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
‘ರಸ್ತೆಯಲ್ಲಿ ಹೊರಟಿದ್ದ ದೂರುದಾರರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಆತ್ಮೀಯವಾಗಿ ಮಾತನಾಡಿದ್ದ. ಚೀಲ ವೊಂದನ್ನು ತೋರಿಸಿ, ‘ಇದರಲ್ಲಿ ಡಾಲರ್ ನೋಟುಗಳಿವೆ. ಇದನ್ನು ರೂಪಾಯಿಗೆ ಬದಲಾಯಿಸಿದರೆ ಲಕ್ಷಾಂತರ ರೂಪಾಯಿ ಸಿಗುತ್ತದೆ. ಹಣ ಬದ ಲಾವಣೆಗೆ ಸಹಾಯ ಮಾಡಿ ಎಂದು ಕೇಳಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಆರೋಪಿಯ ಮಾತನ್ನು ನಂಬಿದ್ದ ಛಾಯಾಕುಮಾರ್, ಜೂನ್ 26ರಂದು ಬೆಳಿಗ್ಗೆ ಬನಶಂಕರಿ ಮೆಟ್ರೊ ನಿಲ್ದಾಣದ ಬಳಿ ವ್ಯಕ್ತಿಯನ್ನು ಭೇಟಿಯಾಗಿ ₹ 2 ಲಕ್ಷ ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಆರೋಪಿ, ತನ್ನ ಬಳಿಯ ಚೀಲ ಕೊಟ್ಟು ಹೊರಟು ಹೋಗಿದ್ದಾನೆ. ಚೀಲ ನೋಡಿದಾಗ, ಹಳೇ ರದ್ದಿ ಕಾಗದಗಳು ಮಾತ್ರ ಇದ್ದವು’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.