ಶುಕ್ರವಾರ, ಅಕ್ಟೋಬರ್ 30, 2020
19 °C

ನಟಿ ಪ್ರಣೀತಾ ಹೆಸರಿನಲ್ಲಿ ₹13.50 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಹೆಸರಿನಲ್ಲಿ 'ಎಸ್‌ಬಿ ಗ್ರೂಪ್ ಆ್ಯಂಡ್ ಡೆವಲಪರ್ಸ್' ಕಂಪನಿ ವ್ಯವಸ್ಥಾಪಕರಿಂದ ₹ 13.50 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೆ. ಅಮರನಾಥ್ ರೆಡ್ಡಿ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಜುನಾಯತ್, ವರ್ಷಾ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು  ಪೊಲೀಸರು ಹೇಳಿದರು.

ದೂರಿನ ವಿವರ: ‘ನಮ್ಮ ಕಂಪನಿಗೆ ಬ್ರ್ಯಾಂಡ್ ಅಂಬಾಸಿಡರ್ ಅಗತ್ಯವಿತ್ತು. ಸ್ನೇಹಿತ ಪ್ರಶಾಂತ್ ಎಂಬುವರ ಮೂಲಕ ಪರಿಚಯವಾಗಿದ್ದ ಆರೋಪಿ ಜುನಾಯತ್, ‘ನಟಿ ಪ್ರಣೀತಾ ಅವರನ್ನು ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಸುತ್ತೇನೆ. ಒಪ್ಪಂದ ಪತ್ರಕ್ಕೆ ಅವರಿಂದಲೇ ಸಹಿ ಮಾಡಿಸಿಕೊಡುತ್ತೇನೆ’ ಎಂದಿದ್ದ. ಇದೇ 10ರಂದು ಹೋಟೆಲೊಂದಕ್ಕೆ ಆರೋಪಿ ವರ್ಷಾ ಎಂಬಾಕೆಯನ್ನು ಕರೆತಂದಿದ್ದ ಜುನಾಯತ್, ಆಕೆ ಪ್ರಣೀತಾ ಅವರ ವ್ಯವಸ್ಥಾಪಕಿ ಎಂದು ಪರಿಚಯಿಸಿದ್ದ. ನಟಿಗೆ ಮುಂಗಡವಾಗಿ ಹಣ ಬೇಕೆಂದು ಹೇಳಿ ಇಬ್ಬರೂ ₹13.50 ಲಕ್ಷ ಪಡೆದಿದ್ದರು. ಅದಾದ ನಂತರ ಹೋಟೆಲ್‌ನ ಕೊಠಡಿಗೆ ಹೋಗಿ ಬರುವುದಾಗಿ ಹೇಳಿಹೋದ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ದೂರಿನಲ್ಲಿ ಅಮರನಾಥ್ ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು