ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತ ಮಲ್ಲಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ

Last Updated 21 ಅಕ್ಟೋಬರ್ 2018, 18:26 IST
ಅಕ್ಷರ ಗಾತ್ರ

ಬೆಂಗಳೂರು: ಮಧುಮೇಹ, ಶ್ವಾಸಕೋಶ, ಮೂಳೆ, ದಂತ, ನರಸಂಬಂಧಿ ಎಕ್ಸ್‌ರೇ ಸೇರಿದಂತೆ ರಕ್ತಪರೀಕ್ಷೆಯನ್ನು ಸಹ ಇಲ್ಲಿನ ಮಾಗಡಿ ರಸ್ತೆಯಲ್ಲಿರುವ ಶಾಂತ ಮಲ್ಲಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭಾನುವಾರ, ತಜ್ಞ ವೈದ್ಯರಿಂದ ಉಚಿತವಾಗಿ ಮಾಡಲಾಯಿತು.

ಕೆಲವು ರೋಗಿಗಳಿಗೆ ಚಿಕಿತ್ಸೆ, ಸಲಹೆ ಸೂಚನೆಗಳನ್ನು ನೀಡಿ, ಔಷಧಿಯನ್ನೂ ಉಚಿತವಾಗಿ ಕೊಡಲಾಯಿತು.

ಆರು ರೋಗಿಗಳಿಗೆ ಉಚಿತವಾಗಿ ಮೂಳೆಸಂಬಂಧಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. 300 ರೋಗಿಗಳ ತಪಾಸಣೆನಡೆಸಿ, 210 ಜನರಿಗೆ ಮಧುಮೇಹ ಪರೀಕ್ಷೆ ಮಾಡಲಾಯಿತು. 15 ಜನ ಶ್ವಾಸಕೋಶ ಪರೀಕ್ಷೆಗೆ ಒಳಗಾದರೆ, ಎಂಟು ಮಂದಿ ಎಕ್ಸ್‌ರೇ ಮಾಡಿಸಿಕೊಂಡರು.

ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವರಾಜ್‍ಗೌಡ, ‘ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದಜನ ಜೀವನ ಸಾಗಿಸಲು ಪಟ್ಟಣಕ್ಕೆ ವಲಸೆ ಬರುತ್ತಾರೆ. ಇವರಲ್ಲಿ ಅನೇಕರಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲುಸಾಧ್ಯವಾಗುವುದಿಲ್ಲ. ಅಂತವರು ಉಚಿತ ಸೇವೆಯ ಅನುಕೂಲ ಪಡೆದುಕೊಂಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT