‘ಭಾಷಾ ವೈವಿಧ್ಯದಲ್ಲಿ ದೇಶದ ಸೌಂದರ್ಯ’
‘ಭಾಷಾ ವೈವಿಧ್ಯದಲ್ಲಿ ದೇಶದ ಸೌಂದರ್ಯ ಅಡಗಿದೆ. ಬಹುತ್ವವೇ ದೇಶದ ಜೀವಾಳ. ಯಾವುದೇ ಒಂದು ಭಾಷೆಯನ್ನು ಎಲ್ಲರೂ ಒಪ್ಪಲು ಸಾಧ್ಯವಿಲ್ಲ. ಹೆಚ್ಚು ಭಾಷೆಗಳನ್ನು ಕಲಿತಲ್ಲಿ ಜಗತ್ತನ್ನು ಹೆಚ್ಚು ಅರಿತುಕೊಳ್ಳಲು ಸಾಧ್ಯ. ಯಾವುದೇ ಒಂದು ಭಾಷೆಯನ್ನು ಹೇರಲು ಸಾಧ್ಯವಿಲ್ಲ. ಭಾಷಾ ರಾಜಕಾರಣಕ್ಕೆ ಅವಕಾಶ ನೀಡಬಾರದು’ ಎಂದು ವಿಷಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಒಂದು ದೇಶ ಒಂದೇ ಭಾಷೆಯನ್ನು ಮಾತನಾಡಬೇಕೇ?’ ಎಂಬ ಗೋಷ್ಠಿಯಲ್ಲಿ ಅನುವಾದಕಿ ದೀಪಾ ಭಾಸ್ತಿ ವಿಮರ್ಶಕ ಜಿ.ಎನ್. ದೇವಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಬರಹಗಾರ ಸಮಂತ್ ಸುಬ್ರಮಣಿಯನ್ ನಿರ್ವಹಿಸಿದರು.