ಭಾನುವಾರ, ಜೂನ್ 26, 2022
22 °C

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಆಯತಪ್ಪಿ ಬಿದ್ದ ಸ್ನೇಹಿತರು: ಯುವತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ರಿಗೇಡ್ ರಸ್ತೆಯ ‘5 ಅವೆನ್ಯೂ’ ಶಾಪಿಂಗ್ ಮಾಲ್‌ವೊಂದರ ಕಟ್ಟಡದಿಂದ ಸ್ನೇಹಿತರಿಬ್ಬರು ಆಯತಪ್ಪಿ ಬಿದ್ದಿದ್ದು, ಲಿಯಾ (20) ಎಂಬುವರು ಮೃತಪಟ್ಟಿದ್ದಾರೆ.

‘ಆಂಧ್ರಪ್ರದೇಶದ ಲಿಯಾ, ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಾಕ್ಸ್‌ಟೌನ್‌ನಲ್ಲಿ ನೆಲೆಸಿದ್ದರು. ಸ್ನೇಹಿತ ಕ್ರಿಸ್ ಪೀಟರ್ ಜೊತೆ ಶನಿವಾರ ಶಾಪಿಂಗ್‌ಗೆ ಬಂದಿದ್ದರು. ಆ ವೇಳೆಯೇ ಇಬ್ಬರೂ ಆಯತಪ್ಪಿ ಬಿದ್ದಿದ್ದರು’ ಎಂದು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹೇಳಿದರು.

‘ತೀವ್ರ ಗಾಯಗೊಂಡ ಯುವತಿಯನ್ನು ನಿಮ್ಹಾನ್ಸ್ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಎಚ್‌ಎಎಲ್‌ ನಿವಾಸಿ ಕ್ರಿಸ್ ಪೀಟರ್ ಅವರ ಕಾಲು ಮುರಿದಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

‘ಲಿಯಾ ಹಾಗೂ ಪೀಟರ್‌ ಮಾಲ್‌ನ ಒಂದೇ ಕಡೆ ನಿಂತಿದ್ದರು. ಏಕಾಏಕಿ ಲಿಯಾ ಆಯತಪ್ಪಿ ಬಿದ್ದಿದ್ದರು. ಅವರನ್ನು ಹಿಡಿದುಕೊಳ್ಳಲು ಯತ್ನಿಸಿ ಪೀಟರ್‌ ಸಹ ಬಿದ್ದಿದ್ದ. ನೆಲಮಹಡಿಯಲ್ಲಿ ಯುವತಿ ಮೇಲೆಯೇ ಪೀಟರ್ ಬಿದ್ದಿದ್ದ. ಅವರಿಬ್ಬರನ್ನು ಗಮನಿಸಿದ್ದ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದೂ ಹೇಳಿದರು.

ಘಟನೆ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಿಭಾಗದ ಡಿಸಿಪಿ (ಪ್ರಭಾರ) ಎಸ್‌.ಡಿ. ಶರಣಪ್ಪ, ‘ಯುವಕ–ಯುವತಿ ಶಾಪಿಂಗ್‌ಗೆ ಬಂದಿದ್ದಾಗ ಆಯತಪ್ಪಿ ಬಿದ್ದಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು