ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಕೃತಿಗಳ ಮಾರಿ ₹ 1.3 ಲಕ್ಷ ಸಂಗ್ರಹಿಸಿದ ಬಾಲಕಿ

ರೋಟರಿ ಸಂಸ್ಥೆಯ ಬೆಂಬಲ*ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ₹ 1 ಲಕ್ಷ ನೆರವು
Last Updated 16 ನವೆಂಬರ್ 2022, 16:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 9 ವರ್ಷದ ಬಾಲಕಿಯೊಬ್ಬಳು ತಾನು ರಚಿಸಿದ ಕಲಾಕೃತಿಗಳನ್ನು ಮಾರಾಟ ಮಾಡುವ ಮೂಲಕ ಬಡ ಮಕ್ಕಳಿಗೆ ನೆರವಾಗಿದ್ದಾಳೆ.

ಜೆ.ಪಿ.ನಗರದ ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ 5ನೇ ತರಗತಿ ಬಾಲಕಿ ಶೃತಿ, ಪೇಟಿಂಗ್‌ಗಳ ಮಾರಾಟದಿಂದಸುಮಾರು ₹ 1.30 ಲಕ್ಷ ಹಣ ಸಂಗ್ರಹಿಸಿದ್ದಾರೆ. ಕೋವಿಡ್ ಕಾಣಿಸಿಕೊಂಡ ಬಳಿಕ ಮನೆಯಲ್ಲಿ ಇದ್ದ ಅವಳು, ಬಿಡುವಿನ ಅವಧಿಯಲ್ಲಿ ವಿವಿಧ ಮಾದರಿಯ ಕಲಾಕೃತಿ ರಚಿಸಿದ್ದಳು. 2021ರಲ್ಲಿ ಸರ್ಕಾರೇತರ ಸಂಸ್ಥೆಯೊಂದರ ನೆರವಿನಿಂದ ಕಲಾಕೃತಿಗಳನ್ನು ಮಾರಾಟ ಮಾಡಿದ ಅವಳು, ₹ 30 ಸಾವಿರ ಸಂಗ್ರಹಿಸಿದ್ದಳು. ಈ ಹಣವನ್ನು ಬಡ ಮಕ್ಕಳಿಗೆ ನೆರವಾಗುತ್ತಿರುವ ಆಶ್ರಮವೊಂದಕ್ಕೆ ನೀಡಿದ್ದಾಳೆ.

ರೋಟರಿ ಸಂಸ್ಥೆಯು ಅವಳ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತ್ತು. 150ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನ ಕಂಡಿದ್ದವು. ಈ ವೇಳೆ ಮಾರಾಟವಾದ ಕಲಾಕೃತಿಗಳಿಂದ ₹ 1 ಲಕ್ಷ ಸಂಗ್ರಹವಾಗಿದೆ. ಅಂತರರಾಷ್ಟ್ರೀಯ ಮಕ್ಕಳ ದಿನಾಚರಣೆ ಪ್ರಯುಕ್ತ ನ.14ರಂದು ಈ ಹಣವನ್ನು ಕ್ಯಾನ್ಸರ್‌ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಒದಗಿಸಲಾಗಿದೆ ಎಂದು ಆರ್ಟ್ ಫಾರ್ ಏಡ್ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT