ಸರ್ಕಾರದ ಜಾಗ ಒತ್ತುವರಿ ವಿರುದ್ಧ ಶಿಸ್ತು ಕ್ರಮ

7

ಸರ್ಕಾರದ ಜಾಗ ಒತ್ತುವರಿ ವಿರುದ್ಧ ಶಿಸ್ತು ಕ್ರಮ

Published:
Updated:
Deccan Herald

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕು ಘಂಟೆ ಹೊಸಹಳ್ಳಿ ಗ್ರಾಮದ ದಲಿತ ಕಾಲೊನಿಯ ರಸ್ತೆ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್‌ ಕೆ.ಎನ್.ರಾಜಶೇಖರ್‌, ಕಂದಾಯ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮಲೆಕ್ಕಿಗ ಮತ್ತು ರಾಜಸ್ವ ನಿರೀಕ್ಷಕರಿಂದ ಮಾಹಿತಿ ಪಡೆದು, ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ ತಹಶೀಲ್ದಾರ್‌, ಕೂಡಲೇ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು, ರಸ್ತೆಗೆ ಅಡ್ಡಲಾಗಿರುವ ಎಲ್ಲವನ್ನು ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾಲೊನಿಗೆ ಪ್ರವೇಶ ಪಡೆಯುವ ಜಾಗದಲ್ಲಿ ಸರ್ವೇ ನಂ 28/4ರಲ್ಲಿ ಜಯಮ್ಮ ಎಂಬುವವರಿಗೆ ಸೇರಿದ ಮೂರು ಗುಂಟೆ ಜಮೀನಿದೆ. ಅದಕ್ಕೆ ಹೊಂದಿಕೊಂಡಂತೆ ಅಲ್ಲಿಯೇ ಎಂಟು ಗುಂಟೆ ’ಬಿ’ ಖರಾಬ್ ಜಮೀನು ಇದೆ. ಜಯಮ್ಮ ಅವರು ಈ  ಜಮೀನು ಕೂಡಾ ನನಗೆ ಸೇರಬೇಕು ಎಂದು ವಾದಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿ  ಮಾಡಲು ಬಿಡದೆ, ಖರಾಬು ಜಮೀನಿನಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಸ್ಥಳೀಯರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತೊಂದರೆ ಕೊಡುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು. 

ಸರ್ಕಾರದ ಆಸ್ತಿ ಒತ್ತುವರಿ ಮಾಡುವುದು ಅಪರಾಧ. ತಾಲ್ಲೂಕಿನಲ್ಲಿ ಎಲ್ಲಿಯೇ ಅಂತಹ ಒತ್ತುವರಿ ಸಂಬಂಧ ದೂರುಗಳು ಬಂದರೆ ಸ್ವತಃ ತಾವೇ ಹೋಗಿ ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ತಹಶೀಲ್ದಾರ್‌ ಹೇಳಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !