ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಸಮರ್ಥ ನಿರ್ವಹಣೆ: ಮುಖ್ಯಮಂತ್ರಿ ಅವರಿಂದ ಜಿಎಸ್‌ಟಿ ಪ್ರಶಸ್ತಿ ಪ್ರದಾನ

Last Updated 1 ಜುಲೈ 2022, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಜಿಎಸ್‌ಟಿ ತೆರಿಗೆಯನ್ನು ಸಮರ್ಥವಾಗಿ ನಿಭಾಯಿಸಿರುವ ರಾಜ್ಯ ಎಂದರೆ ಕರ್ನಾಟಕ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಾಣಿಜ್ಯ ತೆರಿಗೆ ಇಲಾಖೆಯಿಂದ ಆಯೋಜಿಸಿದ್ದ ಜಿಎಸ್‌ಟಿ ದಿನಾಚರಣೆ ಉದ್ಘಾಟನೆ ಮತ್ತು ಮುಖ್ಯಮಂತ್ರಿ ಪ್ರಶಸ್ತಿ ಪದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತೆರಿಗೆ ವಿಧಾನದಲ್ಲಿನ ಬದಲಾವಣೆಗೆ ಹೊಂದಿಕೊಳ್ಳುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿನ ಸದೃಢ, ಪರಿಣತ ತೆರಿಗೆ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಇಂತಹ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು ಎಂದರು.

‘ತೆರಿಗೆ ಹೆಚ್ಚಿಸದೆ, ರಾಜಸ್ವ ಸಂಗ್ರಹ ಹೆಚ್ಚಲಿದೆ ಎಂಬ ಅರಿವಿದ್ದೇ ರಾಜ್ಯ ಆಯವ್ಯಯದಲ್ಲಿ ತೆರಿಗೆ ವಿಧಿಸಲಿಲ್ಲ. ಕೋವಿಡ್ ಸಂದರ್ಭದಲ್ಲಿ 2021ರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪರಿಶೀಲನೆ ಮಾಡಿದಾಗ ಗುರಿಗಿಂತ ₹2000 ಕೋಟಿ ಕಡಿಮೆ ಇತ್ತು. ಆರು ತಿಂಗಳಲ್ಲಿ ಗುರಿ ಮೀರಿ ₹15,000 ಕೋಟಿ ಸಂಗ್ರಹಿಸಲಾಯಿತು. ಈ ಪೈಕಿ ₹7 ಸಾವಿರ ಕೋಟಿ ಜಿಎಸ್‌ಟಿಯಿಂದಲೇ ಬಂದಿತ್ತು. ಒಳ್ಳೆಯ ಕೆಲಸ ಮಾಡಿರುವ ಅಧಿಕಾರಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವನ್ನು ಈ ವರ್ಷ ಆರಂಭಿಸಲಾಗಿದೆ. ಮುಂದೆ ಪ್ರತಿವರ್ಷ ಪ್ರಶಸ್ತಿ ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT